ಪಾಕ್‌ ಎದೆಗೆ ಚೀನಾದ‌ ಮತ್ತೊಂದು ಸಾಲದ ಶೂಲ..! 18 ಸಾವಿರ ಕೋಟಿ ಹೊಸ ಸಾಲ!

masthmagaa.com:

ವಿದೇಶಿ ವಿನಿಮಯದ ಕೊರತೆ, ಹಣದುಬ್ಬರ ಸೇರಿದಂತೆ ಇಡೀ ಅರ್ಥವ್ಯವಸ್ಥೆಯೇ ಹಳ್ಳ ಹಿಡಿದು ಲಂಕಾದಂತೆ ಪಾಕಿಸ್ತಾನ ಕೂಡ ದಿವಾಳಿಯಾಗ್ಬೋದು ಅನ್ನೋ ಪರಿಸ್ಥಿತಿ ಉಂಟಾಗ್ತಿರೋ ಹೊತ್ತಲ್ಲೇ ಪಾಕಿಸ್ತಾನಕ್ಕೆ ಅವರ ಐರನ್‌ ಬ್ರದರ್‌ ಚೀನಾ ಮತ್ತೆ ನೆರವಿಗೆ ಧಾವಿಸಿದೆ. ನೆರವಿಗೆ ಅನ್ನೋದಕ್ಕಿಂತ ಪಾಕಿಗಳ ಕುತ್ತಿಗೆಗೆ ಮತ್ತೊಂದು ಸುತ್ತಿನ ಸಾಲದ ಹಗ್ಗ ಬಿಗಿದಿದೆ. ಚೀನಾದ ಬ್ಯಾಂಕ್‌ ಒಕ್ಕೂಟ ಪಾಕ್‌ ಸರ್ಕಾರಕ್ಕೆ ಹೊಸದಾಗಿ 15 ಬಿಲಿಯನ್‌ ರೆನ್ಮನ್‌ಬಿ (ಅಂದ್ರೆ ಇದು ಚೀನಾದ ಅಫಿಶಿಯಲ್‌ ಕರೆನ್ಸಿ)ಗಳ ಸಾಲ ನೀಡೋದಕ್ಕೆ ಒಪ್ಪಿಗೆ ನೀಡಿದೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 18 ಸಾವಿರ ಕೋಟಿ. ಈ ಬಗ್ಗೆ ಪಾಕ್‌ನ ಹಣಕಾಸು ಸಚಿವ ಮಿಫ್ತಾಹ್‌ ಇಸ್ಮಾಯಿಲ್‌ ಪ್ರತಿಕ್ರಿಯೆ ನೀಡಿದ್ದು ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡುವ ಒಪ್ಪಂದಕ್ಕೆ ಚೀನಾ ಬ್ಯಾಂಕ್‌ಗಳು ಸಹಿ ಹಾಕಿವೆ. ಶೀಘ್ರದಲ್ಲಿ ಆ ಹಣ ನಮ್ಮ ಕೈ ಸೇರಲಿದೆ. ಇದಕ್ಕೆ ಸಹಕರಿಸಿದ ಚೀನಾ ಸರ್ಕಾರಕ್ಕೆ ಧನ್ಯವಾದ ಅಂತ ಹೇಳಿದ್ದಾರೆ.
ಇತ್ತ ಪಾಕ್ ನ ವಿದೇಶಾಂಗ ಸಚಿವ ಬಿಲಾವಲ್‌ ಬುಟ್ಟೋ ಜರ್ಧಾರಿ ಟ್ವೀಟ್‌ ಮಾಡಿ ʻ ಚೀನಾದ ಅಧ್ಯಕ್ಷರಿಗೆ ನಮ್ಮ ನಮನಗಳು. ಚೀನಾದ ಈ ಸಾರ್ವಕಾಲಿಕ ಗೆಳೆತನಕ್ಕೆ, ಅವರು ನಮಗೆ ನೀಡ್ತಿರೋ ಬೆಂಬಲಕ್ಕೆ ಪಾಕಿಸ್ತಾನದ ಜನ ಚೀನಾಗೆ ಕೃತಜ್ಞರಾಗಿದ್ದಾರೆ ಅಂತ ಬಣ್ಣಿಸಿದ್ದಾರೆ. ಇತ್ತ ಇನ್ನೊಂದು ಕಡೆ ಚೀನಾದಿಂದ ಮಾಡ್ತಿರೋ ಈ ವಿಪರೀತ ಸಾಲಕ್ಕೆ ಈಗ ಅಲ್ಲಿನ ಜನರೇ ಆತಂಕ ವ್ಯಕ್ತಪಡಿಸ್ತಿದ್ದಾರೆ. ಪಾಕ್‌ ವಶದಲ್ಲಿರೋ ಗಿಲ್ಗಿಟ್‌ ಬಾಲ್ಟಿಸ್ತಾನ್‌ವನ್ನ ಪಾಕ್‌ ಸರ್ಕಾರ ಚೀನಾ ಬಳಿ ತಾನು ಮಾಡಿರೋ ಸಾಲಕ್ಕೆ ಈ ಭೂಭಾಗವನ್ನ ಲೀಸ್‌ಗೆ ಕೊಡ್ಬೋದು ಅಂತ ಹೇಳಲಾಗಿದೆ. ಈ ಬಗ್ಗೆ ಕಾರಾಕೋರಂ ನ್ಯಾಷನಲ್‌ ಮೂವ್ಮೆಂಟ್‌ ಅಧ್ಯಕ್ಷ ಮುಮ್ತಾಜ್‌ ನಗ್ರಿ ಮಾತಾನಾಡಿದ್ದು ಪಾಕ್‌ ಸರ್ಕಾರ ಗಿಲ್ಗಿಟ್‌ ಬಾಲ್ಟಿಸ್ತಾನವನ್ನ ಚೀನಾಗೆ ನೀಡುತ್ತೆ ಅಂತ ನಮಗೆ ಭಯವಾಗ್ತಿದೆ. ಭವಿಷ್ಯದಲ್ಲಿ ಜಾಗತಿಕ ಶಕ್ತಿಗಳ ಕದನ ಭೂಮಿಯಾಗುತ್ತದೆ ಅಂತ ನನಗೆ ಅನ್ನಿಸ್ತಿದೆ. ಆದ್ರೆ ಪಾಕ್‌ನ ISI ತಂತ್ರಕ್ಕೆ ನಾವು ಧೈರ್ಯಗೆಡಲ್ಲ. ಜೈಲಿಗೆ ಹೋಗೋಕೆ ಕೂಡ ರೆಡಿ ಇದ್ದೀವಿ ಅಂತ ಹೇಳಿದ್ದಾರೆ. ಇತ್ತ IMF ಕೂಡ ಪಾಕಿಸ್ತಾನದಕ್ಕೆ ಸಾಲ ಕೊಡೋ ಬಗ್ಗೆ ಮಹತ್ವದ ಮಾತುಕತೆ ನಡೆಸ್ತಿದ್ದೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply