ದಿಲ್ಲಿ ಸಿಎಂ ಕೇಜ್ರಿವಾಲ್‌ ಮನೆ ನವೀಕರಣ ತಂದ ಸಂಕಷ್ಟ! ಸಿಬಿಐ ಕೈ ಸೇರಿದ ಪ್ರಕರಣ!

masthmagaa.com:

ಲಿಕ್ಕರ್‌ ಸ್ಕ್ಯಾಮ್‌ ಕೇಸ್‌ನ ಬಳಿಕ ದೆಹಲಿ ಸಿಎಂ ಅರವಿಂದದ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸವನ್ನ ರಿನೋವೇಟ್‌ ಮಾಡಲು 45 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಆರೋಪ ಸಾಕಷ್ಟು ಸುದ್ಧಿ ಮಾಡಿತ್ತು. ಇದೀಗ ಕೇಜ್ರಿವಾಲ್‌ರ ಮನೆ ನವೀಕರಣ ಅಕ್ರಮ ಕುರಿತು ತನಿಖೆಯನ್ನ ಕೇಂದ್ರ ಗೃಹ ಸಚಿವಾಲಯ ಸಿಬಿಐಗೆ ನೀಡಿದೆ. ಆದೇಶದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ದೆಹಲಿ ಸರ್ಕಾರದ ವಿವಿಧ ಇಲಾಖೆಗಳ ವರದಿ ಕೇಳಿದ್ದಾರೆ. ಪ್ರಮುಖವಾಗಿ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ ಬಳಿ ಸಿಎಂ ನಿವಾಸ ನವೀಕರಣದ ಕುರಿತು ಲಭ್ಯವಿರುವ ಎಲ್ಲಾ ದಾಖಲೆಗಳನ್ನು, ಕಡತಗಳನ್ನು ಅಕ್ಟೋಬರ್ 3ರೊಳಗೆ ಸಿಬಿಐಗೆ ಸಲ್ಲಿಸಲು ಸೂಚಿಸಿದೆ. ಅಂದ್ಹಾಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಕೇಂದ್ರಕ್ಕೆ ಬರೆದಿದ್ದ ಪತ್ರದ ಆಧಾರದಲ್ಲಿ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ.

-masthmagaa.com

Contact Us for Advertisement

Leave a Reply