ವಾಹನ ಚಾಲಕರಿಗೆ ಕೇಂದ್ರ ಗುಡ್‌ ನ್ಯೂಸ್:‌ ಇಳಿಯಲಿದ್ಯಾ ಇಂಧನದ ಬೆಲೆ?

masthmagaa.com:

ಲೋಕಸಭೆ ಚುನಾವಣೆಗೆ ಹಲವು ತಿಂಗಳ ಮುಂಚೇನೆ, ಅಂದ್ರೆ ಶಿಘ್ರದಲ್ಲೇ ಪೆಟ್ರೋಲ್‌, ಡೀಸೆಲ್‌ ಸೇರಿದ ಇಂಧನಗಳ ಬೆಲೆ ಇಳಿಕೆ ಆಗೋ ಸಾಧ್ಯತೆ ಇದೆ ಅನ್ನೋ ಸುದ್ಧಿ ಕೇಳಿಬಂದಿದೆ. ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಬೆಲೆ ಕಡಿತದ ಸುಳಿವು ನೀಡಿವೆ ಅಂತ ವರದಿಯಾಗಿದೆ. ಪ್ರತಿ ಲೀಟರ್‌ಗೆ 10 ರೂಪಾಯಿ ವರೆಗೆ ಕಟ್‌ ಆಗೋ ಚಾನ್ಸ್‌ ಇದೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಅಂತರಾಷ್ಟ್ರೀಯವಾಗಿ ಕಚ್ಚಾ ತೈಲದ ಬೆಲೆಯಲ್ಲೂ ಇಳಿಕೆ ಕಂಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ 91 ಡಾಲರ್‌ ತಲುಪಿದ್ದ ಕಚ್ಚಾ ತೈಲ ದರ, ಸಧ್ಯ ಪ್ರತಿ ಬ್ಯಾರಲ್‌ಗೆ 72 ಡಾಲರ್‌ ಇದೆ. ಅಲ್ಲದೆ ಭಾರತಕ್ಕೆ ರಷ್ಯಾದಿಂದ ರಿಯಾಯಿತಿ ದರದಲ್ಲಿ ಇಂಧನ ಪೂರೈಕೆ ಆಗ್ತಿದೆ. ಸೋ ಕೇಂದ್ರ ಸರ್ಕಾರ ತೈಲಗಳ ಬೆಲೆಗೆ ಕತ್ತರಿ ಹಾಕುತ್ತೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply