ಚೀನಾ, ಪಾಕಿಸ್ಥಾನ ಗಡಿಗಳಿಗೆ ಹೆಚ್ಚಿನ ರೆಡಾರ್‌ ನಿಯೋಜನೆಗೆ ಕೇಂದ್ರ ಅಸ್ತು!

masthmagaa.com:

ಚೀನಾ ಬಾರ್ಡರ್‌ನಲ್ಲಿ ರೆಡಾರ್‌ ಕವರೇಜ್‌ ಹೆಚ್ಚಿಸೋ ಯೋಜನೆಗೆ ಕೇಂದ್ರ ಸರ್ಕಾರ ಅಪ್ರೂವಲ್‌ ನೀಡಿದೆ. L&T ಕಂಪನಿ ತಯಾರಿಸಿರೋ ಶಕ್ತಿಯುತ ರೆಡಾರ್‌ಗಳನ್ನ LACಯಲ್ಲಿ ನಿಯೋಜಿಸಲಾಗತ್ತೆ. ಇವು ಚೀನಾ ಏರ್‌ಫೋರ್ಸ್‌ನ ಚಟುವಟಿಕೆಗಳನ್ನ ಮಾನಿಟರ್‌ ಮಾಡಲಿವೆ. ಸುಮಾರು 6,000 ಕೋಟಿ ವೆಚ್ಚದಲ್ಲಿ ಈ ರೆಡಾರ್‌ಗಳನ್ನ ನಿಯೋಜಿಸೋಕೆ ಕೇಂದ್ರ ಡಿಸೈಡ್‌ ಮಾಡದೆ. ಅಲ್ಲದೆ ಕೆಲವು ರೆಡಾರ್‌ಗಳನ್ನ ಪಾಕ್‌ ಬಾರ್ಡರ್‌ನಲ್ಲೂ ನಿಯೋಜಿಸೋಕೆ ಪ್ಲಾನ್‌ ಮಾಡಲಾಗಿದೆ. ಈಸ್ಟರ್ನ್‌ ಫ್ರಂಟ್‌ನಲ್ಲಿ ಚೀನಾ ಪಡೆಗಳ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಣ್ಣಿಡೋಕೆ ಈ ಕ್ರಮ ತಗೊಳ್ಳಲಾಗಿದೆ. ಇತ್ತೀಚೆಗೆ ಚೀನಾ ಪಡೆಗಳು ನಿಯಮ ಉಲ್ಲಂಘಿಸಿದ್ದಕ್ಕೆ ಲಡಾಖ್‌ ಬಳಿಯ ಡೆಮ್‌ಚೋಕ್‌ ಸೆಕ್ಟರ್‌ಗೆ ಇಂಡಿಯನ್‌ ಏರ್‌ಫೋರ್ಸ್‌ ಫೈಟರ್‌ಜೆಟ್‌ಗಳನ್ನ ಕಳಿಸಿ ರೆಸ್ಪಾನ್ಸ್‌ ನೀಡಿತ್ತು. ಬಾರ್ಡರ್‌ನಲ್ಲಿ ಈ ರೀತಿಯ ಸನ್ನಿವೇಶಗಳು ಆಗಾಗ ನಡೆಯೋದ್ರಿಂದ ರೆಡಾರ್‌ ಬಳಸಿ ಹೆಚ್ಚಿನ ನಿಗಾ ಇಡೋಕೆ ಡಿಸೈಡ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply