ಕಚ್ಚಾ ತೈಲದ ಮೇಲಿನ ʻವಿಂಡ್‌ ಫಾಲ್‌ ತೆರಿಗೆʼ ಏರಿಸಿದ ಸರ್ಕಾರ!

masthmagaa.com:

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳೀಬಹುದು ಅನ್ನೋ ಸುದ್ದಿಗಳ ನಡುವೆ ಕೇಂದ್ರ ಸರ್ಕಾರ ಕಚ್ಚಾ ತೈಲದ ಮೇಲಿನ ʻವಿಂಡ್‌ ಫಾಲ್‌ ತೆರಿಗೆʼಯನ್ನ ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, ಡೀಸೆಲ್‌ ಮತ್ತು ATF ಅಥವಾ ಜೆಟ್‌ ಫ್ಯೂಲ್‌ ಮೇಲಿನ ತೆರಿಗೆಯನ್ನ ಕಡಿಮೆ ಮಾಡಿದೆ. ಅಂದ್ಹಾಗೆ ಯಾವುದೇ ಒಂದು ವಸ್ತುವಿಗೆ ದಿಢೀರ್‌ ಅಂತ ಡಿಮ್ಯಾಂಡ್‌ ಬಂದು ಇದಕ್ಕಿದ್ದಂತೆ ಅದಕ್ಕೆ ಜಾಸ್ತಿ ಪ್ರಾಫಿಟ್‌ ಬರೋಕೆ ಶುರುವಾದ್ರೆ ಅದಕ್ಕೆ ಸರ್ಕಾರ ಎಕ್ಸ್‌ಟ್ರಾ ಟ್ಯಾಕ್ಸ್‌ ಹಾಕ್ಬಹುದು. ಅದನ್ನ ವಿಂಡ್‌ ಫಾಲ್‌ ಟ್ಯಾಕ್ಸ್‌ ಅಂತ ಕರೀತಿವಿ. (ಕೋವಿಡ್‌ ಉದಾಹರಣೆ) 2022ರ ಜುಲೈನಲ್ಲಿ ಭಾರತದ ಖಾಸಗಿ ಆಯಿಲ್‌ ರಿಫೈನರಿಗಳು ದೇಶ ಬಿಟ್ಟು ಹೊರಗಡೆ ತೈಲ ಜಾಸ್ತಿ ಮಾರ್ತಿವೆ ಅಂತೇಳಿ ಸರ್ಕಾರ ಕಚ್ಚಾ ತೈಲ, ATF ಮುಂತಾದವುಗಳ ಮೇಲೆ ಈ ವಿಂಡ್‌ ಫಾಲ್‌ನ್ನ ವಿಧಿಸಿದ್ವು. ನಂತ್ರ ಅದನ್ನ ಸ್ವಲ್ಪ ಕಡಿಮೆ ಮಾಡಿದ್ವು. ಈಗ ಮತ್ತೆ ಕಚ್ಚಾ ತೈಲದ ಮೇಲೆ ಟನ್‌ಗೆ ₹1,300 ಇದ್ದ ವಿಂಡ್‌ ಫಾಲ್‌ ಟ್ಯಾಕ್ಸ್‌ನ್ನ ₹2,300ಗೆ ಏರಿಸಿದೆ. ಅದೇ ರೀತಿ ATF ಏವಿಯೇಷನ್‌ ಟರ್ಬೈನ್‌ ಫ್ಯೂಲ್‌, ವಿಮಾನಕ್ಕೆ ಹಾಕೋ ಎಣ್ಣೆ ಮೇಲೆ ಲೀಟರ್‌ಗೆ 1 ರುಪಾಯಿ ಹಾಗೆ ಡೀಸೆಲ್‌ಗೆ ಲೀಟರ್‌ಗೆ 50 ಪೈಸೆಯಂತೆ ತೆರಿಗೆಯನ್ನ ಇಳಿಸಿದೆ. ಇವೆಲ್ಲ ಇವತ್ತಿನಿಂದಲೆ ಜಾರಿಯಾಗುತ್ವೆ. ಸಾಮಾನ್ಯವಾಗಿ ಭಾರತದಲ್ಲಿ, ಜಾಗತಿಕ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ₹75 ಆದಾಗ ಈ ವಿಂಡ್‌ಫಾಲ್‌ ತೆರಿಗೆ ಹಾಕ್ತಾರೆ. ಅಂದ್ಹಾಗೆ ಪಾರ್ಲಿಮೆಂಟ್‌ ಎಲೆಕ್ಷನ್‌ ಬೆನ್ನಲ್ಲೇ ಸರ್ಕಾರ ಪೆಟ್ರೋಲ್‌ ಡೀಸೆಲ್‌ ರೇಟ್‌ನಲ್ಲಿ ಹತ್ತತ್ತು ರುಪಾಯಿ ಇಳಿಸ್ಬಹುದು ಅಂತ ಹೇಳಲಾಗ್ತಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಕೂಡ ಡೌನ್‌ ಆಗ್ತಿದೆ. ಸದ್ಯ ಬ್ಯಾರೆಲ್‌ಗೆ 70ರಿಂದ 80 ಡಾಲರ್‌ ಇದೆ. ಹಾಗಾಗಿ ಭಾರತದಲ್ಲಿ ಕೂಡ ಕಡಿಮೆಯಾಗಲಿದೆ. ಪೆಟ್ರೋಲ್‌ ಡೀಸೆಲ್‌ ರೇಟ್‌ ಕಡಿಮೆ ಮಾಡೋ ಪ್ರಪೋಸಲ್‌ ಸದ್ಯ PMO ಆಫೀಸ್‌ಗೆ ಕಳಿಸಲಾಗಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply