ಪಿಎಂ ಉಜ್ವಲ ಯೋಜನೆ: LPG ಸಬ್ಸಿಡಿ ಮೊತ್ತ 200ರೂನಿಂದ 300ರೂಗೆ ಹೆಚ್ಚಳ

masthmagaa.com:

ಬೆಲೆ ಏರಿಕೆಯ ಬಿಸಿಯಲ್ಲಿರುವ ಬಡ ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ LPG ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ ಮೊತ್ತವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು LPG ಸಬ್ಸಿಡಿ ಏರಿಸಿರುವ ವಿಚಾರವನ್ನ ತಿಳಿಸಿದ್ದಾರೆ. ಇದರೊಂದಿಗೆ 14.2 ಕಿಲೋ LPG ಸಿಲಿಂಡರ್ ಅನ್ನು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳು 605.50 ರೂಪಾಯಿಗೆ ಪಡೆಯಬಹುದು.

-masthmagaa.com

Contact Us for Advertisement

Leave a Reply