ಚಂದ್ರಯಾನ-3: ಸಿಗ್ನಲ್‌ ಕಳಿಸದ ವಿಕ್ರಮ್‌ ಮತ್ತು ಪ್ರಗ್ಯಾನ್‌

masthmagaa.com:

ಚಂದ್ರನ ಅಂಗಳದಲ್ಲಿ ನಿದ್ರಿಸುತ್ತಿರುವ ಚಂದ್ರಯಾನ-3 ಲ್ಯಾಂಡರ್‌ ಹಾಗೂ ರೋವರ್‌ನ್ನ ಎಚ್ಚರಗೊಳಿಸಲು ಇಸ್ರೋ ಪ್ರಯತ್ನಪಡ್ತಿದೆ. ಆದ್ರೆ ಇಲ್ಲಿಯವರೆಗೂ ವಿಕ್ರಮ್‌ ಹಾಗೂ ಪ್ರಗ್ಯಾನ್‌ನಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಅಂತ ಇಸ್ರೋ ತಿಳಿಸಿದೆ. ‘ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನ್ನ ಎಚ್ಚರಿಸಿ ಸಂವಹನ ಸ್ಥಾಪಿಸಲು ಪ್ರಯತ್ನಗಳನ್ನ ಮಾಡಲಾಗಿದೆ. ಸದ್ಯದ ಮಟ್ಟಿಗೆ ಅವರಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯುತ್ತವೆ’ ಅಂತ ಇಸ್ರೋ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply