ಹ್ಯಾಪಿ ಬಿಗ್‌ಬಾಸ್‌ ಕಂಟೆಸ್ಟಂಟ್‌ಗಳು ಇವರೇ ನೋಡಿ !

masthmagaa.com:

ಇಷ್ಟು ದಿನ ಕಾಯ್ತಾ ಇದ್ದಂತ ಪ್ರೊಗ್ರಾಮ್‌ ಈಗ ಶುರುವಾಗಿದೆ. ಅಸಲಿ ಆಟಕ್ಕೆ ನಿನ್ನೆ ತೆರೆ ಬಿದ್ದಿದೆ. ಬಿಗ್‌ಬಾಸ್‌ ಸೀಸನ್‌ 10 ನಿನ್ನೆ ಶುಭಾರಂಭವಾಗಿದೆ. ಬಿಗ್‌ಬಾಸ್‌ಗೆ 17 ಜನ ಕಂಟೆಸ್ಟಂಟ್‌ಗಳು ಸೆಲೆಕ್ಟ್‌ ಆಗಿದ್ದಾರೆ. ಆ 17 ಜನ ಯಾರು? ಅವರ ಹಿನ್ನಲೆ ಏನು? ಅಂತ ಇವತ್ತಿನ ಈ ವರದಿಯಲ್ಲಿ ನೋಡೋಣ.

ಬಿಗ್‌ಬಾಸ್‌ ಅಂದಾಗ ಮೊದಲಿಗೆ ನೆನಪಾಗೋದು ಕಿಚ್ಚ ಸುದೀಪ್‌. ಸಾಮಾನ್ಯವಾಗಿ ಸುದೀಪ್‌ ಅವರು ನಿನ್ನೆ ಖಡಕ್‌ ಆಗೇ ಕಾಣಿಸಿಕೊಂಡಿದ್ದಾರೆ. ಅಂದ್ರೆ ಸುದೀಪ್‌ ಅವರ ಲುಕ್‌, ಡ್ರೆಸ್‌ ಎಲ್ಲಾನೂ ಸುಪರ್‌ ಅಂತಾನೇ ಹೇಳಬೋದು. ಬ್ಲಾಕ್‌ ಕಲರ್‌ ಜಾಕೆಟ್‌ ಈವನ್‌ ಬಿಗ್‌ಬಾಸ್‌ ಅವರಿಗೂ ತುಂಬಾನೇ ಇಷ್ಟ ಆಗಿತ್ತು. ಜಾಕೆಟ್‌ ತುಂಬಾ ಚೆನ್ನಾಗಿದೆ ಅಂತ ಬಿಗ್‌ಬಾಸ್‌ ಕೂಡ ಹೇಳಿದ್ದಾರೆ.

1.ಬಿಗ್‌ಬಾಸ್‌ಗೆ ಮೊದಲ ಕಂಟೆಸ್ಟಂಟ್‌ ಆಗಿ ನಮೃತಾ ಗೌಡ ಅವರು ಬಂದಿದ್ದಾರೆ. ಇವರು ಸೀರಿಯಲ್‌ ಆಕ್ಟರ್‌. ನಾಗಿಣಿ ಸಿರಿಯಲ್‌ ಮೂಲಕ ಫೇಮಸ್‌ ಆದ ನಮೃತಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಇದ್ದಾರೆ.

2. ಸ್ನೇಹಿತ್‌, ಇವರು ನಮ್ಮನೆ ಯುವರಾಣಿ ಸೀರಿಯಲ್‌ ಮೂಲಕ ಜನರಿಗೆ ಪರಿಚಯ ಆಗಿದ್ರು. ಆಕ್ಟರ್‌ ಆಗಲೇಬೇಕು ಅನ್ನೋದು ಇವರ ಗುರಿ. 2017ರಿಂದ ಕಲರ್ಸ್‌ ಕನ್ನಡದಲ್ಲಿ ಬರ್ತಾ ಇರುವಂತ ಪ್ರತಿಯೊಂದು ಸೀರಿಯಲ್‌ಗೂ ಆಡಿಷನ್‌ ಕೋಡ್ತಾನೇ ಬಂದಿದ್ದಾರೆ. ಕೊನೆಗೂ ಇವರಿಗೆ ತಮ್ಮನ್ನ ತಾವು ಪ್ರೋವ್‌ ಮಾಡಿಕೊಳ್ಳೋಕೆ ಒಂದು ಒಳ್ಳೆ ಅವಕಾಶ ಅಂತಾನೇ ಹೇಳಬೋದು.

3.ಇನ್ನು ಪ್ರತಿಯೊಂದು ಸೀಸನ್‌ನಲ್ಲೂ ಒಬ್ಬರಲ್ಲಾ ಒಬ್ರು ಸಿಂಗರ್‌ ಅಂತ್ವಾ ರ್ಯಾಪರ್‌ ಇದ್ದೇ ಇರ್ತಾರೆ. ಅದರಿಂತೆ ರ್ಯಾಪರ್‌ ಊರ್ಮಿಳಾ ಈಶಾನಿ ಬಂದಿದ್ದಾರೆ. ಇವರು ಹುಟ್ಟಿದ್ದು ಮೈಸೂರಿನಲ್ಲಿ, ಆದ್ರೆ ಬೆಳೆದಿದ್ದು ಮಾತ್ರ ದುಬೈ ಹಾಗೂ ಲಾಸ್‌ ಎಂಜಲೀಸ್‌ನಲ್ಲಿ. ಬೇರೆ ದೇಶದಲ್ಲಿ ಬೆಳೆದ್ರು ಕನ್ನಡವನ್ನ ತುಂಬಾ ಚೆನ್ನಾಗೇ ಮಾತಾಡ್ತಾರೆ ಈಶಾನಿ.

4.ಹರ ಹರ ಮಹಾದೇವ ಸೀರಿಯಲ್‌ನಲ್ಲಿ ವಿನಯ್‌ ಗೌಡ ಅವರು ಶಿವನ ಪಾತ್ರ ಮಾಡಿದ್ರು. ಶಿವನ ಪಾತ್ರಕ್ಕೆ ಜೀವ ತುಂಬಿದ ವಿನಯ್‌ ಗೌಡ ಅವರು ಅದೇ ಸಿರೀಯಲ್‌ ಮೂಲಕ ತುಂಬಾನೇ ಫೇಮಸ್‌ ಆಗಿದ್ರು. ಇವರು ಫಿಟ್ನೇಸ್‌ ಮೂಲಕ ತಮ್ಮ ಬಾಡಿ ಮತ್ತು ಚಾರ್ಮ್‌ ಅನ್ನ ಸಖತ್‌ ಆಗೇ ಮೇಂಟೇನ್‌ ಮಾಡಿದ್ದಾರೆ.

5. ಕಾಮಿಡಿ ಕಿಲಾಡಿಗಳು ಮೂಲಕ ತುಕಾಲಿ ಸಂತೋಷ್‌ ಅಂತಾನೇ ಫೇಮಸ್‌ ಆಗಿದ್ದಾರೆ ಸಂತೋಷ್‌. ತಮ್ಮ ಕಾಮಿಡಿ ಮೂಲಕ ಇಷ್ಟು ದಿನ ಜನರನ್ನ ನಗಿಸ್ತಾ ಇದ್ದ ಇವರು ಈಗ ಬಿಗ್‌ಬಾಸ್‌ ಮೂಲಕ ತಮ್ಮ ರೀಯಲ್‌ ಲೈಫ್‌ ಅನ್ನ ತೋರಿಸೋಕೆ ಬಂದಿದ್ದಾರೆ.

5. ಈ ಸಲ ಬಿಗ್‌ಬಾಸ್‌ ಸ್ವಲ್ಪ ಸ್ಪೆಷಲ್‌ ಅಂತ ಹೇಳಿದ್ದು ಪ್ರೂವ್‌ ಆಗಿದೆ. ಯಾಕಂದ್ರೆ ತೃತೀಯ ಲಿಂಗಿ ನೀತು ವನಜಾಕ್ಷಿ ಅವರು ಬಿಗ್‌ಬಾಸ್‌ ಕಂಟೆಸ್ಟಂಟ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ತೃತೀಯ ಲಿಂಗಿಗಳ ಬಗ್ಗೆ ನಮ್ಮ ಸಮಾಜದಲ್ಲಿ ಇರುವಂತ ಕಟ್ಟುಪಾಡುಗಳು ದೂರ ಆಗೋಕೆ ಇದು ಒಂದು ಒಳ್ಳೆ ಹೆಜ್ಜೆ ಅಂತಾನೇ ಹೇಳಬೋದು.

6.ರಂಗೋಲಿ ಸೀರಿಯಲ್‌ ಮೂಲಕ ತೆರೆಮೇಲೆ ಮಿಂಚಿದ್ದ ಸಿರಿ ಕೂಡ ಈ ಬಾರಿ ಹ್ಯಾಪಿ ಬಿಗ್‌ಬಾಸ್‌ ಪ್ರೊಗ್ರಾಮ್‌ಗೆ ಬಂದಿದ್ದಾರೆ. ಕಿರುತೆರೆ ಮೂಲಕ ಜನಮನ್ನಣೆ ಗಳಿಸಿದ್ದ ಸಿರಿ ಅವರು ಸಿಂಗಲ್‌ ಆಗೇ ಲೈಫ್‌ ಲೀಡ್‌ ಮಾಡ್ತಿದ್ದಾರೆ.

7. ಸ್ನೇಕ್‌ ಶ್ಯಾಮ್‌ ಅವರ ಹೆಸರನ್ನ ಸಾಮಾನ್ಯವಾಗಿ ಎಲ್ಲರೂ ಕೇಳಿರ್ತಿರಾ. ಸಾವಿರಾರು ಹಾವುಗಳನ್ನ ಹಿಡಿದು ಅವುಗಳನ್ನ ರಕ್ಷಣೆ ಮಾಡಿದ್ದಾರೆ. ಫಿಲಾಸಫಿ ಬಗ್ಗೆ ಹೆಚ್ಚು ಆಸಕ್ತಿ ಇರುವ ಸ್ನೇಕ್‌ ಶ್ಯಾಮ್‌ ಬಿಗ್‌ಬಾಸ್‌ ಮನೆ ಒಳಗೆ ಹೇಗಿರ್ತಾರೆ ಅನ್ನೋ ಕುತೂಹಲ ಕೂಡ ಇದೆ.

8. ಲಕ್ಷಣ ಸೀರಿಯಲ್‌ ಮೂಲಕ ತೆರೆಮೇಲೆ ಜನರನ್ನ ರಂಜಿಸಿದ್ದ ಭಾಗ್ಯಶ್ರೀ ಅವರು ಬಿಗ್‌ಬಾಸ್‌ ಮನೆಗೆ ಹೆಜ್ಜೆ ಇಟ್ಟಿದ್ದಾರೆ. ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಅನುಭವ ಇರುವ ಭಾಗ್ಯಶ್ರೀ ಹ್ಯಾಪಿ ಬಿಗ್‌ಬಾಸ್‌ನಲ್ಲಿ ಯಾವ ರೀತಿ ಟಾಸ್ಕ್‌ಗಳನ್ನ ಕಂಪ್ಲೀಟ್‌ ಮಾಡ್ತಾರೆ ಅಂತ ಕಾದು ನೋಡಬೇಕು.

9. ಹಲವಾರು ಮಾಧ್ಯಮಗಳಲ್ಲಿ ಕೆಲಸ ಮಾಡಿದ ಜರ್ನಲಿಸ್ಟ್‌ ಗೌರೀಶ್‌ ಅಕ್ಕಿ ಅವರು ಈ ಬಾರಿ ಬಿಗ್‌ಬಾಸ್‌ನ ಕಂಟೆಸ್ಟಂಟ್‌ ಕೂಡ ಹೌದು. ತಮ್ಮ ಪ್ರಶ್ನೆಗಳ ಮೂಲಕ, ನೇರ ನುಡಿ ಮೂಲಕ ಫೇಮಸ್‌ ಆಗಿದ್ದ ಇವರು ಮನೆ ಒಳಗೆ ಹೇಗಿರ್ತಾರೆ ಅನ್ನೋ ಕುತೂಹಲ ಜನರಲ್ಲಿ ಸಾಕಷ್ಟಿದೆ.

10. ಮಾಡೆಲ್‌ ಆಗಿರುವಂತ ಮೈಕಲ್‌ ಅವರಿಗೆ ಬಿಗ್‌ಬಾಸ್‌ ಒಂದು ಒಳ್ಳೆ ಅವಕಾಶ ಅಂತಾನೇ ಹೇಳಬೋದು. ಇವರ ತಾಯಿ ಭಾರತದವರು, ತಂದೆ ನೈಜೀರಿಯಾದವರು. ಆದ್ರು ಕೂಡ ಕನ್ನಡವನ್ನ ತುಂಬಾ ಚೆನ್ನಾಗೇ ಮಾತಾಡೋ ಇವರು ಬಿಗ್‌ಬಾಸ್‌ ಮನೆಯಲ್ಲಿ ತಮ್ಮನ್ನ ತಾವು ಹೇಗೆ ಪ್ರೂವ್‌ ಮಾಡಿಕೋಳ್ತಾರೆ ಅಂತ ನೋಡಬೇಕು.

ಡ್ರೋನ್‌ ಪ್ರತಾಪ್‌, ಸಂಗೀತಾ ಶೃಂಗೇರಿ, ಬುಲೆಟ್‌ ಪ್ರಕಾಶ್‌ ಅವರ ಮಗ ರಕ್ಷಕ್‌, ರೈತ ವರ್ತೂರ್ ಸಂತೋಷ್, ತನಿಷಾ ಕುಪ್ಪಂಡ, ಕಾರ್ತಿಕ್. ಈ ಆರು ಜನರಿಗೆ ಬಿಗ್‌ಬಾಸ್‌ 1 ವಾರ ಮನೆ ಒಳಗಡೆ ಇರುವಂತ ಅವಕಾಶ ಕೊಟ್ಟಿದ್ದಾರೆ. ಸೋ 1 ವಾರ ಯಾರ ಫರ್ಫಾಮೆನ್ಸ್‌ ಚೆನ್ನಾಗಿರತ್ತೋ ಅವರು ಮನೆ ಒಳಗಡೆ ಇರ್ತಾರೆ. ಉಳಿದ್ರು ಹೊರಗೆ ಹೋಗ್ತಾರೆ ಅಂತ ಬಿಗ್‌ಬಾಸ್‌ ಹೇಳಿದ್ದಾರೆ. ಸೋ ಮುಂದಿನ 1 ವಾರದಲ್ಲಿ ಈ ಆರು ಜನರಲ್ಲಿ ಯಾರಿರ್ತಾರೆ? ಯಾರು ಹೋಗ್ತಾರೆ ಅನ್ನೋ ಭವಿಷ್ಯ ನಿರ್ಧಾರ ಆಗತ್ತೆ.

ಎಮ್‌.ಎಲ್‌.ಎ ಪ್ರದೀಪ್‌ ಈಶ್ವರ್‌ ಎಂಟ್ರಿ ಕೊಟ್ಟಿದ್ದಾರೆ. ಇವರು ಕಂಟೆಸ್ಟಂಟಾ ಅಥ್ವಾ ಗೆಸ್ಟ್‌ ಆಗಿ ಬಂದಿದ್ದಾರಾ ಅನ್ನೋದು ಮಾತ್ರ ಬಿಗ್‌ಬಾಸ್‌ ಒಬ್ಬರಿಗೆ ಗೊತ್ತಿರೋದು. ಸೋ ಇವತ್ತಿನ ಎಪಿಸೋಡ್‌ ಅನ್ನ ಮಿಸ್‌ ಮಾಡದೇ ನೋಡಿ. ಕ್ಲಾರಿಫಿಕೇಷನ್‌ ಸಿಗತ್ತೆ.

ಇನ್ನು ಬಿಗ್‌ಬಾಸ್‌ ಅನ್ನ ನೀವು ಜಿಯೋ ಸಿನಿಮಾದಲ್ಲಿ 24 ಗಂಟೆಗಳ ನೇರಪ್ರಸಾರವನ್ನ ಉಚಿತವಾಗಿ ನೋಡಬಹುದು.

-masthmagaa.com

Contact Us for Advertisement

Leave a Reply