4 ಮರಿಗಳಿಗೆ ಜನ್ಮ ಕೊಟ್ಟ ನಮೀಬಿಯಾ ಚೀತ!

masthmagaa.com:

ನಮೀಬಿಯಾದಿಂದ ಕರೆತಂದಿದ್ದ ಸಶಾ ಅನ್ನೋ ಚೀತಾ ಇತ್ತೀಚಿಗೆ ತಾನೇ ಸಾವೀಗೀಡಾಗಿತ್ತು. ಆದ್ರೆ ಈಗ ಅದೇ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಯಾಯಾ ಅನ್ನೋ ಚೀತಾವೊಂದು 4 ಮರಿಗಳಿಗೆ ಜನ್ಮ ಕೊಟ್ಟಿದೆ. ಈ ಬಗ್ಗೆ ಕನ್ಸರ್ವೇಟಿವ್‌ ಆಫ್‌ ಫಾರೆಸ್ಟ್‌ನ ಫ್ರಿನ್ಸಿಪಲ್‌ ಚೀಫ್‌ ಜೆಎಸ್‌ ಚೌಹಾಣ್‌ ಮಾಹಿತಿ ಹಂಚಿಕೊಂಡಿದ್ದಾರೆ. ಸಿಯಾಯಾ ಕಳೆದ 5 ದಿನಗಳಿಂದ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ. ಎಲ್ಲಿ ಹೋಯ್ತು ಅಂತ ಹುಡುಕ್ತಾ ಇದ್ವಿ. ಆಗ ಸಿಯಾಯಾ 4 ಮರಿಗಳಿಗೆ ಜನ್ಮ ಕೊಟ್ಟಿರೋ ವಿಚಾರ ಗೊತ್ತಾಗಿದೆ. ತಾಯಿ ಮತ್ತು ಹಾಗೂ ಚೀತಾ ಮರಿಗಳು ಆರಾಮಗಿದ್ದಾರೆ. ಇದು ನ್ಯಾಚುರಲ್‌ ಪ್ರೊಸೆಸ್‌ ಆಗಿರೋದ್ರಿಂದ ನಾವು ಅದನ್ನ ಅಲ್ಲೇ ಬಿಟ್ಟು ಬಂದಿದ್ದೀವಿ ಅದರ ತಂಟೆಗೆ ಹೋಗಿಲ್ಲ ಅಂತ ಚೌಹಾಣ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply