ಮುಖ್ಯ ಚುನಾವಣಾ ಆಯುಕ್ತರಿಗೆ Z-ಕೆಟಗರಿ VIP ಭದ್ರತೆ!

masthmagaa.com:

ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್‌ ಕುಮಾರ್‌ರ ರಕ್ಷಣೆಗೆ ಬಿಗಿ ಬಂದೋಬಸ್ತ್‌ ಒದಗಿಸಲಾಗಿದೆ. ರಾಜೀವ್‌ ಕುಮಾರ್‌ರಿಗೆ ಅಪಾಯ ಉಂಟಾಗೋ ಸಾಧ್ಯತೆ ಇದೆ ಅಂತ ಕೇಂದ್ರ ಗೃಹ ಸಚಿವಾಲಯ Z-ಕೆಟಗರಿ ವಿಐಪಿ ಸೆಕ್ಯುರಿಟಿ ನೀಡಲು ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ಗೆ ಸೂಚನೆ ನೀಡಿದೆ. ಈ ಕೆಲಸಕ್ಕೆ ಸುಮಾರು 40-45 ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ರಾಜೀವ್‌ ಕುಮಾರ್‌ ಅವ್ರಿಗೆ ಅಪಾಯ ಇರೋ ಬಗ್ಗೆ ರಿಪೋರ್ಟ್ ನೀಡಿ, ಬಲವಾದ ಭದ್ರತೆ ಒದಗಿಸಲು ಶಿಫಾರಸು ಮಾಡಿತ್ತು. ಸೋ ಈ ರಿಪೋರ್ಟ್‌ ಆಧಾರದ ಮೇಲೆ ರಾಜೀವ್‌ ಕುಮಾರ್‌ ಜೊತೆ ಇನ್ನುಳಿದ ಇಬ್ಬರು ಚುನಾವಣಾ ಆಯುಕ್ತರಿಗೂ ರಕ್ಷಣೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply