ಚೀನಾದಲ್ಲಿ ತೀವ್ರ ಕೆಮ್ಮು! 2 ತಿಂಗಳಲ್ಲಿ 32,380 ಕೇಸ್‌ಗಳು ಪತ್ತೆ!

masthmagaa.com:

ಹೊಸ ಹೊಸ ರೀತಿಯ ಸಾಂಕ್ರಮಿಕ ರೋಗಗಳು ಹುಟ್ಕೊಳ್ಳೋ ಚೀನಾದಲ್ಲಿ ಇದೀಗ ವೇಗವಾಗಿ ಹರಡಬಲ್ಲ ಕೆಮ್ಮು ವಾಪಸ್ಸಾಗಿದೆ. ಈ ತೀವ್ರ ಕೆಮ್ಮಿಗೆ ವೂಪಿಂಗ್‌ ಕಾಫ್‌ ಅಂತ ಕರೆಯಲಾಗುತ್ತೆ. ಇದೀಗ ಈ ಪ್ರಕರಣಗಳು ಚೀನಾದಲ್ಲಿ ಜಾಸ್ತಿಯಾಗ್ತಿದ್ದು, 2024ರ ಮೊದಲೆರಡು ತಿಂಗಳಲ್ಲೇ 20 ಪಟ್ಟು ಹೆಚ್ಚಾಗಿದೆ. ಪರಿಣಾಮ ಹತ್ತಾರು ಮಂದಿ ಮೃತಪಟ್ಟಿರೋದು ವರದಿಯಾಗಿದೆ. ಈ ವರ್ಷದ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಒಟ್ಟು 32,380 ಕೇಸ್‌ಗಳು ಪತ್ತೆಯಾಗಿವೆ ಅಂತ ಅಲ್ಲಿನ ನ್ಯಾಷನಲ್‌ ಡಿಸೀಸ್‌ ಕಂಟ್ರೋಲ್‌ & ಪ್ರಿವೆನ್ಶನ್‌ ಅಡ್ಮಿನಿಸ್ಟ್ರೇಷನ್‌ ರಿಪೋರ್ಟ್‌ ಮಾಡಿವೆ. ಅಂದ್ಹಾಗೆ 2023ರ ಈ ಅವಧಿಯಲ್ಲಿ ಕೇವಲ 1,421 ಕೇಸ್‌ಗಳು ಮಾತ್ರ ರಿಪೋರ್ಟ್‌ ಆಗಿದ್ವು. ಆದ್ರೆ ಈ ವರ್ಷ ಸಿಕ್ಕಾಪಟ್ಟೆ ಏರಿಕೆಯಾಗಿವೆ. ಅಂದ್ಹಾಗೆ ಈ ಕೆಮ್ಮು ಮೊದಲಿಗೆ ಸಾಮಾನ್ಯ ನೆಗಡಿಯಿಂದ ಶುರುವಾಗುತ್ತೆ. ನಂತ್ರ, ತೀವ್ರ ಕೆಮ್ಮಾಗಿ ಡೆವೆಲಪ್‌ ಆಗ್ತಾನೇ ಹೋಗುತ್ತೆ. ರಾತ್ರಿ ವೇಳೆ ಈ ಕೆಮ್ಮು ತೀವ್ರ ಸ್ವರೂಪ ಪಡೆದುಕೊಳ್ಳುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply