ಗಾಜಾ ಕದನವಿರಾಮಕ್ಕೆ ವಿಶ್ವಸಂಸ್ಥೆಯಲ್ಲಿ ರಷ್ಯಾ ಮತ್ತು ಚೀನಾ ಅಡ್ಡಗಾಲು!

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈಗ ಮತ್ತೊಮ್ಮೆ ಗಾಜಾ ಕದನವಿರಾಮಕ್ಕೆ ರೆಸೊಲ್ಯೂಷನ್‌ ಮುಂದಿಡಲಾಗಿದೆ. ವಿಶೇಷ ಅನ್ನೋ ಹಾಗೇ ಈ ಬಾರಿ ಗಾಜಾ ಕದನವಿರಾಮಕ್ಕೆ ರೆಸೊಲ್ಯೂಷನ್‌ ಮುಂದಿಟ್ಟಿರೋದು ಇಸ್ರೇಲ್‌ನ ಮಿತ್ರರಾಷ್ಟ್ರ ಅಮೆರಿಕ. ಆದ್ರೆ ಈ ರೆಸೊಲ್ಯೂಷನ್‌ಗೆ ಚೀನಾ, ರಷ್ಯಾ ಮತ್ತು ಅಲ್ಜೀರಿಯಾ ದೇಶಗಳು ಅಡ್ಡಗಾಲು ಹಾಕಿವೆ. ಚೀನಾ ಮತ್ತು ರಷ್ಯಾ ತಮ್ಮ ವೀಟೋ ಪವರ್‌ ಬಳಸಿ ರೆಸೊಲ್ಯೂಷನ್‌ ಪಾಸ್‌ ಆಗೋದನ್ನ ತಡೆದಿವೆ. ಈ ವೋಟಿಂಗ್‌ ವೇಳೆ ರೆಸೊಲ್ಯೂಷನ್‌ ಪರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯರ ಪೈಕಿ 11 ಸದಸ್ಯ ರಾಷ್ಟ್ರಗಳು ವೋಟ್‌ ಹಾಕಿವೆ. ಗಯಾನಾ ಈ ವೋಟಿಂಗ್‌ನಲ್ಲಿ ಗೈರಾಗಿತ್ತು.

-masthmagaa.com

Contact Us for Advertisement

Leave a Reply