ಟೆಕ್ನಾಲಜಿ ಸೂಪರ್‌ ಪವರ್: ಪಾಶ್ಚಿಮಾತ್ಯ ದೇಶಗಳನ್ನ ಹಿಂದಿಕ್ಕಿದ ಚೀನಾ

masthmagaa.com:

ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ನಂಬರ್‌ ಒನ್‌ ದೇಶ ಅನ್ನೊ ಬಿರುದನ್ನ ಗಳಿಸೋ ರೇಸ್‌ನಲ್ಲಿ ಚೀನಾ ಮುಂದಿದ್ದು, ಟೆಕ್ನಾಲಜಿಯಲ್ಲಿ ಸೂಪರ್‌ ಪವರ್‌ ದೇಶ ಆಗಲಿದೆ ಅಂತ ವರದಿಯೊಂದು ಹೇಳಿದೆ. ಜಗತ್ತಿನ 44 ಕ್ರಿಟಿಕಲ್‌ ಟೆಕ್ನಾಲಜಿಗಳಲ್ಲಿ 37 ಟೆಕ್ನಾಲಜಿಗಳ ಅಭಿವೃದ್ಧಿಯಲ್ಲಿ ಅಂದ್ರೆ ಡಿಫೆನ್ಸ್‌, ಬಾಹ್ಯಾಕಾಶ, ರೋಬೊಟಿಕ್ಸ್‌, ಎನರ್ಜಿ, ಬಯೋಟೆಕ್ನಾಲಜಿ ಹಾಗೂ AI ತಂತ್ರಜ್ಞಾನಗಳಲ್ಲಿ ಚೀನಾ ತನ್ನ ಮೇಲುಗೈ ಸಾಧಿಸಿದೆ. ಇದರೊಂದಿಗೆ ಈ ತಂತ್ರಜ್ಞಾನ ರೇಸ್‌ನಲ್ಲಿ ಪಾಶ್ಚಿಮಾತ್ಯ ದೇಶಗಳನ್ನ ಚೀನಾ ಹಿಂದಿಕ್ಕಿ ಟಾಪ್‌ 5 ದೇಶಗಳ ಪಟ್ಟಿಯಲ್ಲಿ ಚೀನಾ ಮೊದಲನೇ ಸ್ಥಾನ ಪಡೆದುಕೊಂಡಿದೆ ಅಂತ ಆಸ್ಟ್ರೇಲಿಯಾದ Strategic Policy Institute (ASPI) ವರದಿ ಮಾಡಿದೆ. ಇನ್ನು 44 ಕ್ರಿಟಿಕಲ್‌ ಟೆಕ್ನಾಲಜಿಗಳಲ್ಲಿ 29 ಟೆಕ್ನಾಲಜಿಗಳ ಮೇಲೆ ಪ್ರಾಬಲ್ಯ ಹೊಂದೋ ಮೂಲಕ ಭಾರತ ಮತ್ತು ಬ್ರಿಟನ್‌ ಕೂಡ ಟಾಪ್‌ 5ರಲ್ಲಿ ಸ್ಥಾನ ಪಡೆದಿವೆ. ಇತ್ತ ಅಮೆರಿಕ ಕೇವಲ 7 ಟೆಕ್ನಾಲಜಿಯನ್ನ ಲೀಡ್‌ ಮಾಡ್ತಿದೆ ಅಂತ ASPI ತನ್ನ ವರದಿಯಲ್ಲಿ ಹೇಳಿದೆ.

-masthmagaa.com

Contact Us for Advertisement

Leave a Reply