ಅಫ್ಘಾನಿಸ್ತಾನಕ್ಕೆ ರಾಯಭಾರಿ ನೇಮಿಸಿದ ಚೀನಾ!

masthmagaa.com:

ಅಫ್ಘಾನಿಸ್ತಾನದ ಆಡಳಿತವನ್ನ ತಾಲಿಬಾನ್‌ ವಶಪಡಿಸಿಕೊಂಡ ಮೇಲೆ ಇದೇ ಮೊದಲ ಬಾರಿಗೆ ಚೀನಾ ತನ್ನ ರಾಯಭಾರಿಯನ್ನ ನೇಮಿಸಿದೆ. ಈ ಮೂಲಕ ತಾಲಿಬಾನ್‌ ಆಡಳಿತದಲ್ಲಿ ರಾಯಭಾರಿಯನ್ನ ನೇಮಿಸಿರುವ ಮೊದಲ ದೇಶವಾಗಿದೆ. ಅಫ್ಘಾನಿಸ್ತಾನಕ್ಕೆ ರಾಯಭಾರಿಯನ್ನ ನೇಮಿಸುವುದು ಚೀನಾ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಉಭಯ ದೇಶಗಳ ನಡುವೆ ಮಾತುಕತೆ ಮತ್ತು ಸಹಕಾರವನ್ನ ಮುಂದುವರೆಸುವ ಉದ್ದೇಶ ಹೊಂದಿದೆ ಅಂತ ಚೀನಾ ಹೇಳಿದೆ. ಅಂದ್ಹಾಗೆ ತಾಲಿಬಾನ್‌ ಆಡಳಿತವನ್ನ ಯಾವುದೇ ದೇಶ ಅಧಿಕೃತವಾಗಿ ಗುರುತಿಸಿಲ್ಲ.

-masthmagaa.com

Contact Us for Advertisement

Leave a Reply