ಕೊರೊನಾ ಮರೆತು ಹೊಸ ವರ್ಷ ಸಂಭ್ರಮಿಸಿದ ಚೀನಾ ಜನ! ಅಧ್ಯಕ್ಷ ಜಿನ್‌ಪಿಂಗ್‌ ಹೇಳಿದ್ದೇನು?

masthmagaa.com:

ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಾಗ್ತಿರೊ ಮಧ್ಯೆಯೇ ಚೀನಾದಲ್ಲಿ ಹೊಸ ವರ್ಷವನ್ನ ಅಲ್ಲಿನ ಜನರು ತುಂಬಾ ಅದ್ದೂರಿಯಾಗಿ ವೆಲ್‌ಕಮ್‌ ಮಾಡಿದ್ದಾರೆ. ಸಾವಿರಾರು ಜನರು ಸೇರಿ ಮಧ್ಯರಾತ್ರಿ ಚೀನಾ ಸಂಪ್ರದಾಯದಂತೆ ಬಲೂನ್‌ಗಳನ್ನ ಆಕಾಶದಲ್ಲಿ ಹಾರಿ ಬಿಟ್ಟು ಸೆಲೆಬ್ರೇಟ್‌ ಮಾಡಿದ್ದಾರೆ. ಹೊಸ ವರ್ಷದಂದು ದೇಶವನ್ನ ಉದ್ದೇಶಿಸಿ ಮಾತಾಡಿದ ಅಧ್ಯಕ್ಷ ಷಿ ಜಿನ್‌ಪಿಂಗ್‌, ಸಾಂಕ್ರಾಮಿಕವನ್ನ ತಡೆಯುವ ಹಾಗೂ ಅದನ್ನ ನಿಯಂತ್ರಣ ಮಾಡುವುದ್ರಲ್ಲಿ ನಾವು ಹೊಸ ಫೇಸ್‌ಗೆ ಎಂಟ್ರಿ ಕೊಡ್ತಿದೀವಿ. ಕೋವಿಡ್‌ ಹಿಮ್ಮೆಟ್ಟಿಸುವಲ್ಲಿ ಎಲ್ಲರೂ ಛಲದಿಂದ ಹೋರಾಡ್ತಿದಾರೆ. ಭರವಸೆಯ ಬೆಳಕು ನಮ್ಮ ಮುಂದಿದೆ ಅಂತ ಭಾರೀ ಭಾರೀ ಭಾಷಣ ಮಾಡಿದ್ದಾರೆ. ಈ ಮೂಲಕ ಚೀನಾ ಅಧ್ಯಕ್ಷ ಒಂದು ವಾರದಲ್ಲೇ 2 ಬಾರಿ ಕೋವಿಡ್‌ ಬಗ್ಗೆ ಮಾತಾಡಿದ್ದಾರೆ. ಇನ್ನು ಅತ್ತ ಕೊರೊನಾ ಸಾವು-ನೋವುಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ WHO ಚೀನಾಗೆ ತಾಕೀತು ಮಾಡಿತ್ತು. ಅದರ ಬೆನ್ನಲ್ಲೇ ಚೀನಾ ಅಧಿಕಾರಿಗಳು WHO ಅಧಿಕಾರಿಗಳೊಂದಿಗೆ ಆನ್‌ಲೈನ್‌ ಮೀಟಿಂಗ್‌ ಮಾಡಿ ಕೋವಿಡ್‌ ಪರಿಸ್ಥಿತಿ ಬಗ್ಗೆ ಡಿಸ್ಕಸ್‌ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಗಳು, ಕೊರೊನಾ ಸಾವುಗಳು ಹಾಗೂ ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಚೀನಾಕ್ಕೆ ಮತ್ತೆ WHO ತಿಳಿಸಿದೆ. ಇತ್ತ ಚೀನಾದಲ್ಲಿ ಪ್ರತಿದಿನ 9 ಸಾವಿರ ಜನ ಕೋವಿಡ್‌ನಿಂದ ಸಾವನ್ನಪ್ತಿದಾರೆ ಅಂತ ಯುನೈಟೆಡ್‌ ಕಿಂಗಡಮ್‌ನ ಆರೋಗ್ಯ ಸಂಸ್ಥೆಯೊಂದು ಅಂದಾಜಿಸಿದೆ. ಇನ್ನು ಕೋವಿಡ್‌ ಎದುರಿಸೋಕೆ ಬೇಕಾದ ಅಗತ್ಯ ನೆರವನ್ನ ಚೀನಾಕ್ಕೆ ಕೋಡೋದಾಗಿ ದ್ವೀಪ ರಾಷ್ಟ್ರ ತೈವಾನ್‌ನ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್ (Tsai Ing-wen) ಹೇಳಿದ್ದಾರೆ. ಹೊಸ ವರ್ಷದಂದು ದೇಶದ ಜನರನ್ನ ಉದ್ದೇಶಿಸಿ ಮಾತಾಡಿದ ಇಂಗ್‌ ವೆನ್‌, ಚೀನಾದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚುತ್ತಿರೋದನ್ನ ಎಲ್ಲರೂ ನೋಡಿದ್ದಾರೆ. ಮಾನವೀಯತೆ ಆಧಾರದ ಮೇಲೆ, ಸಾಂಕ್ರಾಮಿಕ ರೋಗದಿಂದ ಹೊರಬರಲು, ಆರೋಗ್ಯಕರ ಮತ್ತು ಸುರಕ್ಷಿತ ಹೊಸ ವರ್ಷಕ್ಕೆ ಕಾಲಿಡಲು ಅಗತ್ಯ ಸಹಾಯವನ್ನು ಒದಗಿಸೋಕೆ ನಾವು ರೆಡಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply