ಚೀನಾದಲ್ಲಿ ಮತ್ತೊಂದು ವೈರಸ್‌ ಪತ್ತೆ! ಚೀನಾದ ಅಧಿಕಾರಿಗಳು ಹೇಳಿದ್ದೇನು?

masthmagaa.com:

ಕೋವಿಡ್‌ ನಾಲ್ಕನೇ ಅಲೆ ಬರುತ್ತೆ ಅನ್ನೋ ಭೀತಿ ನಡುವೆ ಸಾಂಕ್ರಾಮಿಕ ರೋಗಗಳ ರಫ್ತುದಾರ ಚೀನಾದಲ್ಲಿ ಮತ್ತೊಂದು ರೋಗ ಪತ್ತೆಯಾಗಿದೆ. ಇಷ್ಟು ದಿನದಿಂದ ಮನುಷ್ಯನಿಂದ ದೂರವಿದ್ದೂ ಹೆದರಿಸ್ತಿದ್ದ ಬರ್ಡ್‌ ಫ್ಲೂಅಥ್ವಾ ಹಕ್ಕಿಜ್ವರದ ಎಚ್‌3ಎನ್‌8 ತಳಿ ಮೊದಲ ಬಾರಿಗೆ ಮಾನವನ ದೇಹದಲ್ಲಿ ಪತ್ತೆಯಾಗಿದೆ. ಚೀನಾದ ಹೆನಾನ್‌ ಪ್ರಾಂತ್ಯದ ನಾಲ್ಕು ವರ್ಷದ ಬಾಲಕನ ದೇಹದಲ್ಲಿ ಇದು ಕಂಡು ಬಂದಿದೆ. ಆದ್ರೆ ಇದು ಒಬ್ಬರಿಂದ ಒಬ್ಬರಿಗೆ ಹರಡಿ ಅಪಾಯಕಾರಿ ಪರಿಣಾಮ ಉಂಟು ಮಾಡೋದಿಲ್ಲ ಅಂತ ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಚ್‌3ಎನ್‌8 (H3N8) ವೈರಸ್ 2002ರಿಂದಲೂ ವಿವಿಧ ದೇಶಗಳಲ್ಲಿ ಹರಿದಾಡುತ್ತಿದೆ. ಉತ್ತರ ಅಮೆರಿಕದಲ್ಲಿನ ನೀರಿನ ಪಕ್ಷಿಗಳಲ್ಲಿ ಇದು ಮೊದಲ ಬಾರಿ ಪತ್ತೆಯಾಗಿತ್ತು. ಅದಾದ ನಂತರ ಸಾಮನ್ಯವಾಗಿ ಕುದುರೆ, ನಾಯಿಗಳು ಮತ್ತು ಸೀಲ್‌ಗಳಿಗೆ ಮಾತ್ರ ಹರಡ್ತಿತ್ತು.ಆದರೆ ಇದು ಈ ಹಿಂದೆ ಮನುಷ್ಯರಲ್ಲಿ ಪತ್ತೆಯಾಗಿರಲಿಲ್ಲ.

-masthmagaa.com

Contact Us for Advertisement

Leave a Reply