ಮಹಾರಾಷ್ಟ್ರ: RSS ಪ್ರಧಾನ ಕಚೇರಿಗೆ ಬಂತು ಚೀನಿ ತಂಡ!

masthmagaa.com:

ಭಾರತ-ಚೀನಾ ಉದ್ವಿಗ್ನ ಸಂಬಂಧದ ನಡುವೆ, ಕಳೆದ ತಿಂಗಳು ಚೀನಾ ರಾಯಭಾರಿಗಳು RSS ಕಚೇರಿಗೆ ಬಂದಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಗ್‌ಪುರದಲ್ಲಿರೋ RSSನ ಪ್ರಧಾನ ಕಚೇರಿಗೆ ದೆಹಲಿ ಮತ್ತು ಮುಂಬೈನ ಚೀನಾ ರಾಯಭಾರ ಕಚೇರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇನ್ನು ಚೀನಾ ರಾಯಭಾರಿಗಳು ಈ ರೀತಿ ಹಿಂದುತ್ವವನ್ನ ಪ್ರತಿಪಾದಿಸೋ RSS ಕಚೇರಿಯನ್ನ ಭೇಟಿ ಮಾಡಿರೋದು ಇದೇ ಮೊದಲು. ಈ ವೇಳೆ ಕಚೇರಿಯಲ್ಲಿ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಇರದ ಕಾರಣ, ಚೀನಾ ರಾಯಭಾರಿಗಳಿಗೆ ಅವ್ರನ್ನ ಮೀಟ್‌ ಮಾಡೋಕಾಗಿಲ್ಲ. ಆದ್ರೆ RSSನ ಹಿರಿಯ ನಾಯಕರನ್ನ ಭೇಟಿ ಮಾಡಿ, ಕಚೇರಿಯ ಕ್ಯಾಂಪಸ್‌ಗೆ ರೌಂಡ್‌ ಹಾಕಿದ್ರು. ಜೊತೆಗೆ ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಹಿಂದಿ ವಿಶ್ವವಿದ್ಯಾನಿಲಯಕ್ಕೂ ವಿಸಿಟ್‌ ಕೊಟ್ಟಿದ್ರು ಅಂತ RSS ನಾಯಕರು ಕನ್ಫರ್ಮ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply