ಚೀನಾದಲ್ಲಿ ಕೊರೊನಾ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದ ಅಧ್ಯಕ್ಷ ಜಿನ್‌ಪಿಂಗ್!

masthmagaa.com:

ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ವ್ಯಾಪಕವಾಗಿ ಹರಡ್ತಿರೋ ಬಗ್ಗೆ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್‌ ಮೌನ ಮುರಿದಿದ್ದಾರೆ. ಜನರ ಬದುಕನ್ನು ರಕ್ಷಿಸೋಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಂತ ತಮ್ಮ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.  ನಾವು ಆರೋಗ್ಯಕ್ಕೆ ಸಂಬಂಧಪಟ್ಟ ಅಭಿಯಾನವನ್ನ ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕವನ್ನ ತಡೆಗಟ್ಟೋಕೆ ಮತ್ತು ನಿಯಂತ್ರಣಕ್ಕೆ ತರೋಕೆ ಒಟ್ಟಾಗಿ ಕೆಲಸ ಮಾಡಬೇಕು. ಜನರ ಬದುಕನ್ನ ಸಹ ಬಲಪಡಿಸಬೇಕು. ಜನರ ಜೀವನ, ಸುರಕ್ಷತೆ ಮತ್ತು ಆರೋಗ್ಯವನ್ನು ರಕ್ಷಿಸಬೇಕು ಅಂತ ಜಿನ್‌ ಪಿಂಗ್‌ ತಮ್ಮ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಇನ್ನು ಚೀನಾದಲ್ಲಿ ಸದ್ಯಕ್ಕೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಕೊರೊನಾ ಹರಡ್ತಾ ಇದ್ದು ದೊಡ್ಡ ಪ್ರಮಾಣ ಸಾವು ನೋವಿಗೂ ಇದು ಕಾರಣವಾಗಿದೆ. ಸಾವಿನ ಕುರಿತು ಚೀನಾ ಸರ್ಕಾರ ಎಲ್ಲೂ ಸರಿಯಾದ ಮಾಹಿತಿಯನ್ನ ಕೊಡ್ತಾಯಿಲ್ಲ. ಇನ್‌ ಫ್ಯಾಕ್ಟ್‌ ಕಳೆದ ಕೆಲದಿನಗಳಿಂದ ಕೊರೊನಾ ಸೋಂಕಿನ ಲೆಕ್ಕ ಕೊಡೋದನ್ನ ಸಹ ಚೀನಾ ಸರ್ಕಾರ ಬಂದ್‌ ಮಾಡಿದೆ. ಚೀನಾದಲ್ಲಿ ಕೆಲವು ವರದಿಗಳ ಪ್ರಕಾರ ದಿನಕ್ಕೆ ಮೂರು ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ತಗುಲ್ತಾ ಇದೆ. ಈಗಾಗಲೇ ವೈದ್ಯಕೀಯ ಸಮಸ್ಯೆಗಳು ಸಹ ಚೀನಾದಲ್ಲಿ ಕೊರತೆಯಲ್ಲಿ ಇರೋದಾಗಿ ಕೆಲ ವರದಿಗಳು ತಿಳಿಸಿವೆ. ಇವೆಲ್ಲದ್ರ ನಡುವೆ ಚೀನಾ ಸರ್ಕಾರ ಕೊರೊನಾ ನೀತಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ತಂದಿದೆ. ಹೊರಗಿನಿಂದ ಬರುವ ಪ್ರಯಾಣಿಕರಿಗೆ ಅಂದ್ರೆ ವಿದೇಶಿ ಪ್ರವಾಸದ ಹಿನ್ನೆಲೆ ಇರೋರಿಗೆ ಯಾವುದೇ ಕ್ವಾರಂಟೈನ್‌ ಇರೋದಿಲ್ಲ ಅಂತ ಹೇಳಿದೆ. ಜನವರಿ 8 ರಿಂದ ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ COVID-19 ಕ್ವಾರಂಟೈನ್ ಅಗತ್ಯವನ್ನು ಚೀನಾ ಸರ್ಕಾರ ಕೈಬಿಡಲಿದೆ ಅಂತ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿಕೆ ಪ್ರಕಟ ಮಾಡಿದೆ. ಈ ಮೂಲಕ ಚೀನಾದಲ್ಲಿ ಕೊವಿಡ್‌ ನೀತಿಯಲ್ಲಿ ಮತ್ತೊಂದು ದೊಡ್ಡ ಸಡಿಲಿಕೆ ಮಾಡಿದಂತಾಗಿದೆ. ಇನ್ನು ಆಗಲೇ ಹೇಳಿದಂತೆ ಕೊವಿಡ್‌ನಿಂದ ಸಾವಿನ ಪ್ರಮಾಣ ಸಹ ದೊಡ್ಡ ಮಟ್ಟದಲ್ಲೇ ಸಂಭವಿಸ್ತಾ ಇದೆ. ಸರ್ಕಾರ ಈ ಬಗ್ಗೆ ಅಧಿಕೃತ ಮಾಹಿತಿ ಕೊಡದೇ ಇದ್ರೂ ಚೀನಾದ ಕೆಲವು ಭಾಗಗಳಲ್ಲಿ ಪರಿಸ್ಥಿತಿ ಕೈಮೀರೋ ಹಂತದಲ್ಲಿದೆ ಅಂತ ಅನೇಕರು ಆತಂಕ ವ್ಯಕ್ತಪಡಿಸ್ತಿದ್ದಾರೆ. ಇದ್ರ ಬೆನ್ನಲ್ಲೇ ಕೊರೊನಾಗೆ ಸಂಬಂಧಪಟ್ಟಂತೆ ಚೀನಾದ ಕೆಲವು ಫೋಟೋಗಳು ವೈರಲ್‌ ಆಗ್ತಾಇವೆ. ಶವಾಗಾರದ ಮುಂದೆ ಜನ ತಮ್ಮ ಸಂಬಂಧಿಕರ ಸಂಸ್ಕಾರಕ್ಕಾಗಿ ಕ್ಯೂ ನಿಂತಿದ್ದಾರೆ. ಗಂಟೆಗಟ್ಟಲೇ ಕಾಯುತ್ತ ಕುಳಿತಿರೋ ದೃಶ್ಯ ಹೃದಯ ವಿದ್ರಾವಕವಾಗಿದೆ ಅಂತ ಅಲ್ಲಿನ ಆರೋಗ್ಯ ತಜ್ಞರೊಬ್ರು ವಿಡಿಯೋ ಒಂದನ್ನ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply