ಬ್ರಿಟನ್‌ ಆರ್ಥಿಕತೆಯನ್ನ ನುಂಗಿ ಹಾಕಿದ ಚೀನಾ!

masthmaga.com:

ಬ್ರಿಟನ್‌ನ ಎಲ್ಲಾ ರೀತಿಯ ಆರ್ಥಿಕ ವಲಯದಲ್ಲಿ ಚೀನಾ ಯಶಸ್ವಿಯಾಗಿ ಆವರಿಸಿಕೊಂಡಿದೆ ಅಂತ ವರದಿಯೊಂದ್ರಿಂದ ತಿಳಿದು ಬಂದಿದೆ. ಜಾಗತಿಕವಾಗಿ ಆರ್ಥಿಕ ಹಾಗೂ ತಾಂತ್ರಿಕ ಸೂಪರ್‌ ಪವರ್‌ ಆಗಿ ಚೀನಾ ಬೆಳೆಯುತ್ತಿದ್ದು, ಇದ್ರಿಂದ ಬ್ರಿಟನ್‌ಗೆ ಬೆದರಿಕೆಯಿದೆ ಅಂತ ಅಲ್ಲಿನ ಹೌಸ್‌ ಆಫ್‌ ಕಾಮನ್ಸ್‌ನ Intelligence and Security Committee (ISC) ತನ್ನ ವರದಿಯಲ್ಲಿ ಎಚ್ಚರಿಸಿದೆ. ಅಲ್ದೆ ಜಾಗತಿಕವಾಗಿ ಚೀನಾ ತನ್ನ ಗುಪ್ತಚರ ಚಟುವಟಿಕೆಗಳನ್ನ ನಡೆಸುತ್ತಿದ್ದು, ನಮ್ಮ ಏಜೆನ್ಸಿಗಳಿಗೆ ಇದು ಅತಿದೊಡ್ಡ ಚಾಲೆಂಜ್‌ ಆಗಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಬ್ರಿಟನ್‌ನ ಪ್ರತಿಯೊಂದು ಆರ್ಥಿಕ ವಲಯಕ್ಕೂ ಕಾಲಿಡುವ ಅಂದ್ರೆ ಎಲ್ಲಾ ಕ್ಷೇತ್ರಗಳಲ್ಲೂ ಜಾಗತಿಕವಾಗಿ ವ್ಯಾಪಾರ ವಹಿವಾಟು ನಡೆಸುವ ಸಾಮರ್ಥ್ಯ ಚೀನಾಗೆ ಇದೆ. ಆದ್ರೆ ಚೀನಾ ಕೇವಲ ಆರ್ಥಿಕವಾಗಿ ಪ್ರಾಬಲ್ಯ ಹೊಂದುವ ಗುರಿ ಇಟ್ಕೊಂಡಿಲ್ಲ. ತನ್ನ ಆಕ್ರಮಣಕಾರಿ ನೀತಿಯನ್ನ ಜಾರಿಗೊಳಿಸುವ ಉದ್ದೇಶ ಹೊಂದಿದೆ. ಹೀಗಾಗಿ ಚೀನಾದ ಬೆದರಿಕೆಯನ್ನ ಫೇಸ್‌ ಮಾಡೋಕೆ ಬೇಕಾದ ತಯಾರಿಯನ್ನ ಸರ್ಕಾರ ಮಾಡಿಕೊಳ್ಬೇಕು ಅಂತ ವರದಿಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply