ರಷ್ಯಾ ಜೊತೆ ವ್ಯಾಪಾರ ನಡೆಸಿ ಲಾಭದ ಹಾದಿ ಹಿಡಿದ ಚೀನಾ!

masthmagaa.com:

ರಷ್ಯಾ-ಯುಕ್ರೇನ್‌ ಯುದ್ಧದಿಂದ ಎರಡೂ ದೇಶಗಳು ವಿಪರೀತ ನಷ್ಟ ಅನುಭವಿಸ್ತಿವೆ, ಆದ್ರೆ ಚೀನಾ ಮಾತ್ರ ಈ ಯುದ್ಧದಿಂದ ಸಖತ್‌ ದುಡ್ಡು ಮಾಡ್ತಿದೆ. ಕಳೆದ ವರ್ಷದಿಂದ ಚೀನಾ ಮತ್ತು ರಷ್ಯಾ ನಡುವೆ ಆರ್ಥಿಕ ಸಂಬಂಧ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಆಗ್ತಾನೆ ಹೋಗ್ತಿದೆ. ಕಳೆದ 11 ತಿಂಗಳಿಂದ ರಷ್ಯಾ ಮತ್ತು ಚೀನಾ ಮಧ್ಯೆ 200 ಬಿಲಿಯನ್‌ ಡಾಲರ್‌ ಅಂದ್ರೆ 16.6 ಲಕ್ಷ ಕೋಟಿ ರೂಪಾಯಿ ವ್ಯಾಪಾರ ಆಗಿದೆ ಅಂತ ಹೇಳಲಾಗಿದೆ. ಇದ್ರಲ್ಲಿ ದೊಡ್ಡ ಲಾಭ ಆಗಿರೋದು ಚೀನಾದ ವಾಹನ ತಯಾರಕ ಕಂಪನಿಗಳಿಗೆ. ಯಾಕಂದ್ರೆ ಈ ಮುಂಚೆ ರಷ್ಯಾದಲ್ಲಿ ಹೆಚ್ಚಾಗಿ ಜರ್ಮನ್‌ ಮೇಡ್‌ ಮರ್ಸಿಡೀಸ್‌-ಬೆಂಜ್‌, BMW ಸೇಲ್‌ ಆಗ್ತಿದ್ವು. ಆದ್ರೆ ಯುದ್ಧ ಶುರುವಾದಾಗಿಂದ ಈ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನ ಬಂದ್‌ ಮಾಡಿವೆ. ಹೀಗಾಗಿ ಚೀನಿ ಕಾರ್‌ಗಳು ರಷ್ಯಾದಲ್ಲಿ ಭರ್ಜರಿ ಸೇಲ್‌ ಆಗ್ತಿವೆ ಎಷ್ಟರಮಟ್ಟಿಗೆ ಅಂದ್ರೆ, ಚೀನಾ ಜಪಾನ್‌ನ ಬೀಟ್‌ ಮಾಡಿ ವಿಶ್ವದ ಅತೀ ದೊಡ್ಡ ಕಾರ್‌ ಎಕ್ಸ್‌ಪೋರ್ಟರ್‌ ಆಗಿದೆ. ಚೀನಾ-ರಷ್ಯಾ ನಡುವಿನ ಹಿಮ ತುಂಬಿದ ಬಾರ್ಡರ್‌ನಲ್ಲಿ ಚೀನಾ ವೇರ್‌ಹೌಸ್‌ಗಳು, 20 ಅಂತಸ್ತಿನ ಆಫೀಸ್‌ಗಳನ್ನ ಮಾಡ್ಕೊಂಡಿದೆ. 11 ತಿಂಗಳಲ್ಲಿ ಚೀನಾದ ಎಕ್ಸ್‌ಪೋರ್ಟ್‌ 69% ಏರಿಕೆಯಾಗಿದೆ. ಇನ್ನು ರಷ್ಯಾ ಕೂಡ ಡಿಸ್ಕೌಂಟ್‌ ರೇಟ್‌ನಲ್ಲಿ ಆಯಿಲ್‌ ಮತ್ತು ನ್ಯಾಚುರಲ್‌ ಗ್ಯಾಸ್‌ನ ಚೀನಾಗೆ ಮಾರ್ತಿದೆ.

-masthmagaa.com

Contact Us for Advertisement

Leave a Reply