ರಷ್ಯಾಗೆ ʻಚೀನಾʼ ಭಯ? ರಹಸ್ಯ ಮಿಲಿಟರಿ ಡಾಕ್ಯುಮೆಂಟ್‌ ಲೀಕ್‌!

masthmagaa.com:

ರಷ್ಯಾದ ಸಿಕ್ರೇಟ್‌ ಮಿಲಿಟರಿ ಡಾಕ್ಯುಮೆಂಟ್‌ ಒಂದು ಲೀಕ್‌ ಆಗಿದ್ದು ಭಾರೀ ಸದ್ದು ಮಾಡ್ತಿದೆ. ಚೀನಾ ಮತ್ತು ರಷ್ಯಾಗಳು ಯುದ್ದಕ್ಕೆ ಸಿದ್ದವಾಗಿದ್ವು ಅನ್ನೋ ಭಯಂಕರ ವಿಚಾರ ಅದರಿಂದ ಗೊತ್ತಾಗಿದೆ. ರಷ್ಯಾದ ಮೇಲೆ ಚೀನಾ ಆಕ್ರಮಣ ಮಾಡ್ಬೋದು ಅನ್ನೋ ಭಯದಿಂದ 2008 ರಿಂದ 2014ರವರೆಗೆ ರಷ್ಯಾ ಸಮರಾಭ್ಯಾಸ ನಡೆಸಿತ್ತು ಅನ್ನೋ ವಿಷಯ ಹೊರಬಿದ್ದಿದೆ. ಚೀನಾ ಮತ್ತು ರಷ್ಯಾ ಬಹಳ ಕ್ಲೋಸ್‌ ಆಗಿ ʻನೋ ಲಿಮಿಟ್ಸ್‌ʼ ಪಾರ್ಟನರ್‌ಶಿಪ್‌ ಬಗ್ಗೆ ಹೇಳ್ಕೊಳ್ತಿರಿವಾಗ್ಲೇ ಈ ಸಮರಾಭ್ಯಾಸವನ್ನ ರಷ್ಯಾ ನಡೆಸಿತ್ತು ಅಂತ ಹೇಳಲಾಗ್ತಿದೆ. ಚೀನಾ ಯಾವ್ದೆಲ್ಲಾ ರೀತಿಯಲ್ಲಿ ರಷ್ಯಾ ಮೇಲೆ ಆಕ್ರಮಣ ಮಾಡ್ಬೋದು ಅನ್ನೋದನ್ನ ಊಹೆ ಮಾಡಿ ರಷ್ಯಾ ಈ ಸಮರಾಭ್ಯಾಸ ಮಾಡಿತ್ತು ಅಂತ ಪಶ್ಚಿಮದ ಮಾಧ್ಯಮಗಳು ವರದಿಮಾಡಿವೆ. ಲೀಕ್‌ ಆಗಿರೋ ಡಾಕ್ಯುಮೆಂಟ್‌ ಪ್ರಕಾರ…”ರಷ್ಯಾದಲ್ಲಿನ ಪ್ರತಿಭಟನಾಕಾರರನ್ನ ಪ್ರಚೋದಿಸಿ ರಷ್ಯಾದ ಪೂರ್ವ ಭಾಗದ ಅತೀ ಕಡಿಮೆ ಜನಸಂಖ್ಯೆ ಇರೋ ಪ್ರದೇಶಗಳಲ್ಲಿ ಚೀನಾ ದಾಳಿ ನಡೆಸೋಕೆ ಉದ್ದೇಶಿಸಿದೆ” ಅಂತ ಉಲ್ಲೇಖಿಸಲಾಗಿದೆ. ಇದ್ರಿಂದ ರಷ್ಯಾ ಪೂರ್ವ ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಹೆಚ್ಚಾಗಲಿದೆ. ಜನರು ಹಾಗೂ ಪೊಲೀಸ್‌ ಮಧ್ಯೆ ಸಂಘರ್ಷ ನಡೆಯಲಿದೆ. ರಷ್ಯಾದ ಪೊಲೀಸ್‌ ಸ್ಟೇಷನ್‌ ಮತ್ತು ಸೇನಾ ಕಟ್ಟಡಗಳ ಮೇಲೆ ದಾಳಿ ಆಗಲಿದೆ. ಈ ವೇಳೆ ರಷ್ಯಾದಲ್ಲಿ ಉದ್ವಿಗ್ನತೆ ಪೀಕ್‌ಗೆ ರೀಚ್‌ ಆದ್ಮೇಲೆ, ಆ ಬಳಿಕ ಚೀನಾ ತನ್ನ ಸೇನೆ ನುಗ್ಗಿಸಲಿದೆ. ತನ್ನ ರಕ್ಷಣಾ ಉತ್ಪಾದನೆಯನ್ನ ಹೆಚ್ಚು ಮಾಡಿ ರಷ್ಯಾದ ಪೂರ್ವ ಭಾಗದಲ್ಲಿ ಅಂದ್ರೆ ಚೀನಾ-ರಷ್ಯಾ ಬಾರ್ಡರ್‌ನಲ್ಲಿ ಆಕ್ರಮಣಕ್ಕೆ ಮುಂದಾಗಲಿದೆ. ಅಲ್ದೇ ಇದೇ ವೇಳೆ ರಷ್ಯಾ ವಿರುದ್ಧ ಹತ್ಯಾಕಾಂಡ ಆರೋಪವನ್ನೂ ಚೀನಾ ಮಾಡಲಿದೆ ಅಂತ ರಷ್ಯಾದ ಈ ಡಾಕ್ಯಮೆಂಟ್‌ನಲ್ಲಿ ತಿಳಿಸಲಾಗಿದೆ. ಸಧ್ಯ ಈ ಬಗ್ಗೆ ಎರಡೂ ರಾಷ್ಟ್ರಗಳೂ ತಳ್ಳಿ ಹಾಕಿವೆ.

-masthmagaa.com

Contact Us for Advertisement

Leave a Reply