ವಲಸಿಗರೆ ಅಮೆರಿಕದ ಆರ್ಥಿಕ ಬೆಳವಣಿಗೆಗೆ ಕಾರಣ: ಜೊ ಬೈಡನ್‌!

masthmagaa.com:

ಭಾರತ, ಜಪಾನ್‌, ರಷ್ಯಾ ಮತ್ತು ಚೀನಾ ಆರ್ಥಿಕ ಬೆಳವಣಿಗೆ ಬಗ್ಗೆ ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಮಾತಾಡಿದ್ದಾರೆ. ಜಪಾನ್‌ ರಷ್ಯಾ ಭಾರತ ಚೀನಾ ಎಲ್ಲಾ ಯಾಕೆ ಆರ್ಥಿಕ ತೊಂದ್ರೆಯನ್ನ ಫೇಸ್‌ ಮಾಡ್ತಿವೆ? ಯಾಕಂದರೆ ಇವೆಲ್ಲಾ ಕ್ಸೆನೋಪೋಬಿಯಾ ಅಂದ್ರೆ ಅನ್ಯ ದೇಶದ ಜನರನ್ನ ದ್ವೇಷಿಸುತ್ತವೆ. ಅವರಿಗೆ ಬೇರೆ ದೇಶವನ್ನ ಕಂಡ್ರೆ ಆಗಲ್ಲ. ಆದ್ರೆ ಅಮೆರಿಕಗೆ ವಲಸಿಗರು ಬೇಕು. ವಲಸಿಗರು ನಮ್ಮನ್ನ ಮತ್ತಷ್ಟು ಬಲಗೊಳಿಸ್ತಾರೆ..ಹೀಗಾಗಿ ಅಮೆರಿಕದ ಆರ್ಥಿಕತೆ ಬೆಳವಣಿಗೆಯಲ್ಲಿ ವಲಸಿಗರ ಪಾತ್ರ ಪ್ರಮುಖವಾಗಿದೆ‌ ಅಂತ ಬೈಡೆನ್‌ ಹೇಳಿದ್ದಾರೆ. ಜೊತೆಗೆ ವಲಸಿಗರು ಬರೋ ವಿಚಾರ ಅಮೆರಿಕಗೆ ಒಳ್ಳೇದು.. ಹೀಗಾಗಿ ನಾವು ನಮ್ಮ ದೇಶಕ್ಕೆ ಬರೋ ವಲಸಿಗರನ್ನ ವೆಲ್‌ಕಮ್‌ ಮಾಡ್ತೀವಿ ಅಂತ ಬೈಡನ್‌ ಹೇಳಿದ್ದಾರೆ. ಅಂದ್ಹಾಗೆ ಅಮೆರಿಕದಲ್ಲಿ ಪಾಲೇಸ್ತೇನ್‌ ಪರ ಹೋರಾಟ ನಡೀತಿದ್ದು ಅಲ್ಲಿನ ವಲಸಿಗರು ಬೈಡೆನ್‌ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕ್ತಿದ್ದಾರೆ. ಐತಿಹಾಸಿಕವಾಗಿ ಬೈಡೆನ್‌ಗೆ ವಲಸಿಗರು ಹೆಚ್ಚು ವೋಟ್‌ ಹಾಕೋದ್ರಿಂದ ಈ ರೀತಿಯ ಪ್ರತಿಭಟನೆಗಳು ಬೈಡೆನ್‌ರ ಅಧಿಕಾರಕ್ಕೆ ಕುತ್ತುತರಬೋದು ಅಂತ ಹೇಳ್ತಿದ್ದಾರೆ. ಹೀಗಾಗಿ ಅವರನ್ನ ಸಮಾಧಾನ ಮಾಡೋಕೆ ಬೈಡೆನ್‌ ಈ ಸ್ಟೇಟ್‌ಮೆಂಟ್ ಕೊಟ್ಟಿರಬೋದು ಅಂತೇಳಲಾಗ್ತಿದೆ. ಜೊತೆಗೆ ಅಮೆರಿಕದಲ್ಲಿ ರಿಪಬ್ಲಿಕನ್‌ ಪಕ್ಷ ಈ ಸಲ ಅಧಿಕಾರಕ್ಕೆ ಬಂದ್ರೆ ಕಠಿಣ ನೀತಿಗಳನ್ನ ತರಬೋದು ಅಂತೇಳಲಾಗ್ತಿದೆ. ಹೀಗಾಗಿ ವಲಸಿಗ ವೋಟ್‌ ಬ್ಯಾಂಕ್‌ನ್ನ ಗಟ್ಟಿ ಮಾಡೋಕೆ ಬೈಡೆನ್‌ ಈ ರೀತಿ ವಲಸಿಗರ ಪರ ಬ್ಯಾಟ್‌ ಬೀಸಿದ್ದಾರೆ ಅನ್ನೋ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply