ಪಾಕಿಸ್ತಾನಕ್ಕಾಗಿ ಹ್ಯಾಂಗರ್‌-ಕ್ಲಾಸ್‌ ಸಬ್‌ಮರೀನ್‌ ತಯಾರಿಸಿದ ಚೀನಾ!

masthmagaa.com:

ಭಾರತದ ವಿರುದ್ದ ಪಾಕಿಸ್ತಾನವನ್ನ ತನ್ನ ಲಾಂಚ್‌ ಪ್ಯಾಡ್‌ನಂತೆ ಬಳಸ್ತಿರೋ ಚೀನಾ ಈಗ ಪಾಕ್‌ಗೆ ಹೊಸ ಸಬ್‌ಮರೀನ್‌ ಕೊಡೋಕೆ ಮುಂದಾಗಿದೆ. ಎಲ್ಲಾ ಹವಾಮಾನಗಳಿಗೂ ಒಗ್ಗುವ, ತನ್ನ ಹ್ಯಾಂಗರ್‌-ಕ್ಲಾಸ್‌ ಸಬ್‌ಮರೀನ್‌ನ್ನ ಚೀನಾ ಈಗ ಲಾಂಚ್‌ ಮಾಡಿದೆ. ಈ ಲಾಂಚಿಂಗ್‌ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ನೌಕಾ ಮುಖ್ಯಸ್ಥರಾದ ಅಡ್ಮಿರಲ್‌ ನವೀದ್‌ ಅಶ್ರಫ್‌ ಹಾಜರಿದ್ರು ಅಂತ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಅಂದ್ಹಾಗೆ ಈ ಹಿಂದೆ ಪಾಕ್‌ ಮತ್ತು ಚೀನಾಗಳು ಈ ಸಬ್‌ಮರೀನ್‌ ಕುರಿತಂತೆ ಒಪ್ಪಂದ ಮಾಡಿಕೊಂಡಿದ್ವು. ಭಾರತವನ್ನ ಗಮನದಲ್ಲಿಟ್ಟುಕೊಂಡು ಚೀನಾ ಈ ಅಗ್ರಿಮೆಂಟ್‌ ಮಾಡ್ಕೊಂಡಿತ್ತು. ಇದರ ಪ್ರಕಾರ ಚೀನಾ ಪಾಕ್‌ಗೆ 8 ಅಡ್ವಾನ್ಸ್ಡ್‌ ಸಬ್‌ಮರೀನ್‌ ನೀಡೋಕೆ ಒಪ್ಪಿಕೊಂಡಿತ್ತು. 8 ಸಬ್‌ಮರೀನ್‌ಗಳ ಪೈಕಿ, ನಾಲ್ಕು ಸಬ್‌ಮರೀನ್‌ಗಳು ಚೀನಾದಲ್ಲಿ ಅಂದ್ರೆ ವುಚಾಂಗ್‌ ಶಿಪ್‌ಬಿಲ್ಡಿಂಗ್‌ ಇಂಡಸ್ಟ್ರೀ ಗ್ರೂಪ್‌ನಲ್ಲಿ ತಯಾರಿಯಾಗಬೇಕಿತ್ತು., ಇನ್ನುಳಿದ ನಾಲ್ಕು ʻಟ್ರಾನ್ಸ್‌ಫರ್‌ ಆಫ್‌ ಟೆಕ್ನಾಲಜಿʼ (ToT) ಒಪ್ಪಂದದ ಅಡಿಯಲ್ಲಿ… ಪಾಕಿಸ್ತಾನದ ಕರಾಚಿ ಶಿಪ್‌ಯಾರ್ಡ್‌ & ಎಂಜಿನಿಯರಿಂಗ್‌ ವರ್ಕ್ಸ್‌ನಲ್ಲಿ ತಯಾರಾಗಬೇಕಿತ್ತು. ಅದರ ಕೆಲಸ ಕೂಡ ಈಗ ನಡೀತಿದೆ. ಅದರಂತೆ ಈಗ ಚೀನಾ ಒಂದು ಸಬ್‌ಮರೀನ್‌ನ್ನ ನಿರ್ಮಿಸಿ ಪಾಕ್‌ಗೆ ಕೊಡೋಕೆ ಸಿದ್ದವಾಗಿದೆ. ಈ ಮೂಲಕ ಭಾರತದ ವಿರುದ್ದ ಪಾಕಿಸ್ತಾನಕ್ಕೆ ಇಂಪಾರ್ಟೆಂಟ್‌ ಆಯುಧಗಳನ್ನ ಕೊಡೋದನ್ನ ಚೀನಾ ಕಂಟಿನ್ಯೂ ಮಾಡಿದೆ. ಈಗಾಗಲೇ ಯುದ್ದವಿಮಾನಗಳು, ರೆಡಾರ್‌ ಸಿಸ್ಟಂಗಳನ್ನ ಪಾಕಿಸ್ತಾನಕ್ಕೆ ಕೊಟ್ಟಿರೋ ಚೀನಾ ಭಾರತ ತನ್ನ ಸೇನೆಯಲ್ಲಿ ಏನೆಲ್ಲಾ ಹೊಂದಿದೆಯೋ ಅದನ್ನ ಪಾಕಿಸ್ತಾನಕ್ಕೂ ಕೊಟ್ಟು ಎರಡೂ ದೇಶಗಳ ನಡುವೆ ಸಮಬಲ ಸಾಧಿಸೋ ಪ್ರಯತ್ನ ಮಾಡ್ತಿದೆ. ಇಲ್ಲಿ ಚೀನಾದ ಆಯುಧಗಳು ಭಾರತದ ಮುಂದೆ ಎಷ್ಟರ ಮಟ್ಟಿಗೆ ಶಕ್ತಿಯುತ ಅನ್ನೋದು ಬೇರೆ ಮಾತು. ಆದ್ರೆ ಭಾರತದ ಬಳಿ ಎಂಥೆಂಥಾ ಆಯುಧಗಳಿವೆಯೋ ಅದೇ ರೂಪದ ಆಯುಧಗಳನ್ನ ಚೀನಾ ಪಾಕಿಸ್ತಾನಕ್ಕೆ ಕೊಡೋ ಮೂಲಕ ಭಾರತದ ವಿರುದ್ದ ಎತ್ತಿಕಟ್ಟೋ ಕೆಲಸ ಮಾಡ್ತಿದೆ. ಅದ್ರಂತೆ ಈಗ ಸಬ್‌ಮರೀನ್‌ ಕೊಡ್ತಿದ್ದಾರೆ. ನಿಮಗೆ ಗೊತ್ತಿರಲಿ ಭಾರತ ಕೂಡ ಈಗಾಗಲೇ 75 ಸಬ್‌ಮರೀನ್‌ಗಳನ್ನ ತಯಾರಿಸೋಕೆ ಯೋಜನೆ ಹಾಕೊಂಡಿದ್ದು ಈಗಾಗಲೇ ಒಂದಷ್ಟು ಸಬ್‌ಮರೀನ್‌ಗಳು ಭಾರತದ ಸೇನೆಯಲ್ಲಿದೆ. ಸೋ ಹೀಗಾಗಿ ಭಾರತಕ್ಕೆ ಟಕ್ಕರ್‌ ಕೊಡ್ತೀವಿ ಅನ್ಕೊಂಡು ಪಾಕಿಸ್ತಾನಕ್ಕೂ ಚೀನಾ ಈ ರೀತಿ ಜಲಾಂತರ್ಗಾಮಿ ನೌಕೆ ಕೊಟ್ಟಿದೆ. ಇನ್ನು ಈ ಸಬ್‌ಮರೀನ್‌ನ ವಿಶೇಷತೆ ಬಗ್ಗೆ ಕೂಡ ಪಾಕಿ ಮಾಧ್ಯಮಗಳು ಕೊಂಡಾಡಿವೆ. ಇದ್ರಲ್ಲಿ ಅಡ್ವಾನ್ಸ್ಡ್‌ ಸ್ಟೆಲ್ತ್‌ ಫೀಚರ್‌ ಇದೆ ಅಂತ ಹೇಳಿದ್ದಾರೆ. ಅಂದ್ರೆ ರೇಡಾರ್‌ಗಳಿಗೂ ಈ ಸಬ್‌ಮರೀನ್‌ಗಳು ಕಾಣ್ಸೋದಿಲ್ವಂತೆ. ಜೊತೆಗೆ ಇದ್ರಲ್ಲಿ ಅಡ್ವಾನ್ಸ್ಡ್‌ ಶಸ್ತ್ರಾಸ್ತ್ರಗಳು ಇವೆಯಂತೆ. ಎಲ್ಲಾ ರೀತಿಯ ವಾತವರಣದಲ್ಲೂ ಇವು ಕಾರ್ಯ ನಿರ್ವಹಿಸ್ತವೆ ಅಂತ ಪಾಕಿಸ್ತಾನ ಹೇಳ್ಕೊಂಡಿದೆ ಜೊತೆಗೆ ಸಮುದ್ರದಲ್ಲಿನ ಎಲ್ಲಾ ಟಾರ್ಗೆಟ್‌ಗಳನ್ನ ಇದು ಹೊಡೆದುರುಳಿಸೋ ಸಾಮರ್ಥ್ಯ ಹೊಂದಿದೆ ಅಂತ ಈ ಚೈನಾ ಪ್ರಾಡಕ್ಟ್‌ ಬಗ್ಗೆ ಪಾಕ್ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ಇನ್ನು ಸಬ್‌ಮರೀನ್‌ ಲಾಂಚ್‌ ಸಮಾರಂಭದಲ್ಲಿ ಮಾತನಾಡಿರೋ ನೇವಲ್‌ ಚೀಫ್‌ ಅಶ್ರಫ್‌, ʻಈ ಸಬ್‌ಮರೀನ್‌ನಿಂದ ಪಾಕ್‌ ಮತ್ತು ಚೀನಾ ನಡುವಿನ ಸಂಬಂಧಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ. ಜತೆಗೆ ಇದು ಉಭಯ ದೇಶಗಳ ನಡುವಿನ ಬಲವಾದ ಸೇನಾ ಸಹಕಾರ ತೋರಿಸುತ್ತೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply