ಸಿಬ್ಬಂದಿ ಸಹಿತ ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಿದ ಚೀನಾ!

masthmagaa.com:

ಬಾಹ್ಯಾಕಾಶದಲ್ಲಿ ಅಮೆರಿಕಕ್ಕೆ ಸ್ಪರ್ಧೆ ನೀಡ್ತಾ ಬಂದಿರೊ ಚೀನಾ, ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನ ನಿರ್ಮಾಣ ಮಾಡ್ತಿದೆ. ಇದರ ಭಾಗವಾಗಿ 3 ಗಗನಯಾತ್ರಿಗಳನ್ನ ಹೊತ್ತ ಶೆನ್‌ಜೌ-15 (Shenzhou-15) ಬಾಹ್ಯಾಕಾಶ ನೌಕೆಯನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಬಾಹ್ಯಾಕಾಶ ನೌಕೆ ಹೊತ್ತ ಲಾಂಗ್‌ ಮಾರ್ಚ್-2‌F ರಾಕೆಟ್‌ ನಿನ್ನೆ ರಾತ್ರಿ 11.08 ಗಂಟೆಗೆ ಅಲ್ಲಿನ ಜಿಕ್ವಾನ್‌ ಉಡಾವಣಾ ಕೇಂದ್ರದಿಂದ ಲಾಂಚ್‌ ಆಗಿದೆ. 6 ತಿಂಗಳ ಮಿಷನ್‌ ಇದಾಗಿದ್ದು, ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಇನ್ನು ಈ ಹಿಂದೆ ಇದೇ ಸ್ಪೇಸ್‌ ಸ್ಟೇಷನ್‌ ನಿರ್ಮಾಣಕ್ಕಂತಲೇ ಶೆನ್‌ಜೌ-14 ಮಿಷನ್‌ನಲ್ಲಿ ಹೋಗಿದ್ದ ಗಗನಯಾತ್ರಿಗಳು ಅಲ್ಲೇ ಇದಾರೆ. ಈಗ ಅವ್ರು ಅರ್ಧಕ್ಕೆ ಬಿಟ್ಟಿರೊ ಕೆಲಸವನ್ನ ಇವಾಗ ಹೋಗ್ತಿರೊ ಗಗನಯಾತ್ರಿಗಳಿಗೆ ಹಸ್ತಾಂತರ ಮಾಡಿ ಡಿಸೆಂಬರ್‌ನಲ್ಲಿ ಭೂಮಿಗೆ ಮರಳಲಿದ್ದಾರೆ.

-masthmagaa.com

 

Contact Us for Advertisement

Leave a Reply