ಭಾರತ-ಚೀನಾ ಗಡಿ ಸಮಸ್ಯೆಗೆ ದ್ವಿಪಕ್ಷೀಯ ಸಂಬಂಧ ಹೋಲಿಕೆ ಸಲ್ಲ!

masthmagaa.com:

ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋ ಹಾಗೆ ಚೀನಾ ಮತ್ತೆ ಭಾರತಕ್ಕೆ ಬುದ್ಧಿ ಹೇಳೋ ಕೆಲಸ ಮಾಡಿದೆ. ಭಾರತ-ಚೀನಾ ಗಡಿ ಸಮಸ್ಯೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನ ರೆಪ್ರೆಸೆಂಟ್‌ ಮಾಡಲ್ಲ. ಅದು ನಮ್ಮ ಲೆಗಸಿ ಇಶ್ಯೂ, ಪರಂಪರಾಗತ ಸಮಸ್ಯೆ ಅಂತ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್‌ ವೂ ಕಿಯಾನ್‌ ಹೇಳಿದ್ದಾರೆ. ಇತ್ತೀಚೆಗೆ ವಿದೇಶಾಂಗ ಸಚಿವ‌ ಎಸ್ ಜೈಶಂಕರ್‌, 2020ರಲ್ಲಿ ಚೀನಾ ಒಪ್ಪಂದಗಳನ್ನ ಉಲ್ಲಂಘಿಸಿ LACಯಲ್ಲಿ ಸೇನೆ ನಿಯೋಜಿಸಿ, ಗಲ್ವಾನ್‌ ಕಣಿವೆಯಲ್ಲಿ ಉದ್ವಿಗ್ನತೆ ಸೃಷ್ಟಿ ಮಾಡಿತ್ತು ಅಂತೇಳಿದ್ರು. ಇದಕ್ಕೆ ರಿಪ್ಲೈ ನೀಡಿರೋ ವೂ ಕಿಯಾನ್‌, ಗಲ್ವಾನ್‌ ಕಣಿವೆ ಇರೋದೆ ಚೀನಾ ಒಳಗೆ. ನಾವೇನು ಮಾಡಿಲ್ಲ. ಭಾರತವೇ ಒಪ್ಪಂದಗಳನ್ನ ಉಲ್ಲಂಘನೆ ಮಾಡಿದೆ. ಭಾರತ ಎಲ್ಲಾ ವಿಚಾರಗಳನ್ನೂ ಗಡಿ ಸಮಸ್ಯೆಗೆ ಲಿಂಕ್‌ ಮಾಡುತ್ತೆ. ಅದರ ಬದಲು ಭಾರತ, ಚೀನಾ ಜೊತೆ ಪರಸ್ಪರ ನಂಬಿಕೆ, ಗಡಿಯಲ್ಲಿನ ಶಾಂತಿ ಹಾಗೂ ನೆಮ್ಮದಿ ನೆಲೆಸೋ ನಿಟ್ಟಿನಲ್ಲಿ ಕೆಲಸ ಮಾಡ್ಬೇಕು ಅಂತ ಉಪದೇಶ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply