ಏಷ್ಯಾ ರಾಷ್ಟ್ರಗಳಲ್ಲೇ ಹಿಂದುಳಿದ ಚೀನಾದ ಆರ್ಥಿಕ ಬೆಳವಣಿಗೆ: ವಿಶ್ವಬ್ಯಾಂಕ್‌ ವರದಿ

masthmagaa.com:

ಜಗತ್ತಿನ ದೊಡ್ಡಣ್ಣ ಅನ್ನೊ ಬ್ಯಾಡ್ಜ್‌ಅನ್ನ ಅಮೆರಿಕದಿಂದ ಕಿತ್ತುಕೊಂಡು ತನ್ನ ಕೊರಳಿಗೆ ಹಾಕಿಕೊಳ್ಳೋಕೆ ಚೀನಾ ಮಾಡ್ತಿರೋ ಕೆಲಸ ಒಂದೆರಡಲ್ಲ. ಬೇರೆ ದೇಶಗಳ ಆಂತರಿಕ ವಿಚಾರಗಳಲ್ಲಿ ಕೈಯಾಡಿಸಿ, ಅಲ್ಲಿ ನಿಧಾನವಾಗಿ ತನ್ನ ಸಾಫ್ಟ್‌ ಪವರನ್ನ ಹೆಚ್ಚಿಸೋಕೆ ಇನ್ನಿಲ್ಲದ ಪ್ರಯತ್ನ ಮಾಡ್ತಿರೋ ಚೀನಾದ ವಿರುದ್ದ ಮತ್ತೊಂದು ಆರೋಪ ಕೇಳಿಬಂದಿದೆ. ಅಭಿವೃದ್ದಿ ಹೊಂದಿದ ದೇಶಗಳಾದ ಕೆನಡ ಮತ್ತು ಐರ್ಲ್ಯಾಂಡ್‌ ಸೇರಿದಂತೆ ಜಗತ್ತಿನಾದ್ಯಂತ ಅಕ್ರಮವಾಗಿ ಪೊಲೀಸ್‌ ಠಾಣೆಗಳನ್ನ ತೆರೆದಿದೆ ಅಂತ ಮಾಹಿತಿ ಸಿಕ್ಕಿದೆ. ಇದು ಮಾನವ ಹಕ್ಕುಗಳ ಬಗ್ಗೆ ಕೂಡ ಆತಂಕವನ್ನ ಉಂಟುಮಾಡಿದೆ. ಈ ಅಕ್ರಮ ಪೊಲೀಸ್‌ ಸ್ಟೇಷನ್‌ಗಳಿಂದ ಕೆಲ ದೇಶಗಳಲ್ಲಿ ನಡೆಯೊ ಚುನಾವಣೆಗಳ ಮೇಲೆಯೂ ಚೀನಾ ಸರ್ಕಾರ ಪ್ರಭಾವ ಬೀರ್ತಿದೆ ಅಂತ ಹೇಳಲಾಗ್ತಿದೆ. ಇನ್ನು ಈ ತರಹದ ಒಟ್ಟು 30 ಸ್ಟೇಷನ್‌ಗಳನ್ನ 21 ದೇಶಗಳಲ್ಲಿ ಚೀನಾ ಈಗಾಗಲೇ ಓಪನ್‌ ಮಾಡಿದೆ ಅಂತ ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಚೀನಾ, ಇವು ಸ್ಕಿಲ್‌ ಅಥ್ವಾ ಕೌಶಲ್ಯ ತರಬೇತಿ ಕೇಂದ್ರಗಳು. ಉಗ್ರಗಾಮಿಗಳನ್ನ ಎದುರಿಸೋಕೆ ಈ ಕೇಂದ್ರಗಳು ಅವಶ್ಯಕವಾಗಿವೆ ಅಂತ ಹೇಳಿದೆ. ಅಂದ್ಹಾಗೆ 2019ರಲ್ಲೂ ಚೀನಾ ಈ ವಿಷಯವಾಗಿ ಪ್ರತಿಕ್ರಿಯಿಸಿತ್ತು. ಆವಾಗ ಅನೇಕ ಜನರು ಈ ಕೇಂದ್ರಗಳಿಂದಾನೇ ತರಬೇತಿ ಪಡೆದಿದ್ದಾರೆ ಅಂತ ಹೇಳಿತ್ತು. ಇನ್ನೊಂದ್‌ ಕಡೆ ಅಮೆರಿಕಕ್ಕೆ ವಿದ್ಯಾರ್ಥಿಯಾಗಿ ಬಂದಿದ್ದ ವ್ಯಕ್ತಿಯೊಬ್ಬ ಗುಪ್ತಚರ ಸಂಸ್ಥೆಗೆ ಸಹಾಯ ಮಾಡೊ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾನೆ. 31 ವರ್ಷದ Ji Chaoqun ಅನ್ನೊ ಈ ಚೀನಾ ವ್ಯಕ್ತಿ ಅಮೆರಿಕಕ್ಕೆ ಎಲಿಕ್ಟ್ರಿಕಲ್‌ ಇಂಜಿನಿಯರ್‌ ಓದೋಕೆ 2013ರಲ್ಲಿ ಬಂದಿದ್ದ. ಆದ್ರೆ ಇಲ್ಲಿಂದ ಕೆಲ ಮಾಹಿತಿಗಳನ್ನ ಚೀನಾಕ್ಕೆ ಕಳುಹಿಸುತ್ತಿದ್ದ ಅಂತ ತಿಳಿದು ಬಂದಿತ್ತು. ಈತನನ್ನ 2018ರಲ್ಲೇ ಬಂಧಿಸಲಾಗಿತ್ತು. ಇದೀಗ ಈತನಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನ ವಿಧಿಸಲಾಗಿದೆ. ಇನ್ನು ಇದರ ನಡುವೆಯೇ ಚೀನಾಗೆ ಆರ್ಥಿಕತೆಗೆ ಸಂಬಂಧ ಪಟ್ಟಂತೆ ಬಿಗ್‌ ವಾರ್ನಿಂಗ್‌ ರೀತಿಯ ವರದಿ ಬಂದಿದೆ. ಏಷ್ಯಾ ರಾಷ್ಟ್ರಗಳ ಸರಾಸರಿ ಆರ್ಥಿಕ ಬೆಳವಣಿಗೆಗಿಂತ ಚೀನಾದ ಆರ್ಥಿಕ ಬೆಳವಣಿಗೆ ತುಂಬಾ ನಿಧಾನಗತಿಯಲ್ಲಿ ಸಾಗ್ತಿದೆ ಅಂತ ವರದಿಯಾಗಿದೆ. ಇನ್ನು ಈ ರೀತಿ ಆಗಿರೋದು 1990ರ ಬಳಿಕ ಮೊದಲ ಬಾರಿಗೆ ಅಂತ ವರ್ಲ್ಡ್‌ ಬ್ಯಾಂಕ್‌ ಮುನ್ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಇದಕ್ಕೆ ಕಾರಣ ಎಲ್ಲರಿಗೆ ಗೊತ್ತಿರೊ ಹಾಗೆ ಅಧ್ಯಕ್ಷ ಷಿ ಜಿನ್‌ಪಿಂಗ್‌ರ ಜಿರೋ ಕೋವಿಡ್‌ ನೀತಿ. ಇದರಿಂದಾನೇ ಜಗತ್ತಿನ ದೊಡ್ಡ ಮಾರುಕಟ್ಟೆ ಕ್ಷೀಣಿಸ್ತಾಯಿದೆ, ಹಿನ್ನೆಡೆ ಅನುಭವಿಸ್ತಿದೆ ಅಂತ ವರದಿ ಮಾಡಲಾಗಿದೆ. ಈ ಹಿಂದೆ ನೀಡಿದ್ದ ಜಿಡಿಪಿ ಮುನ್ಸೂಚನೆಯನ್ನ ವಿಶ್ವಬ್ಯಾಂಕ್‌ ರಿವೈಸ್‌ ಮಾಡಿದೆ. ಕಳೆದ ವರ್ಷ ಚೀನಾದ ಜಿಡಿಪಿ ಬೆಳವಣಿಗೆಯನ್ನ 8.1% ಹೇಳಿದ್ದ ವಿಶ್ವಬ್ಯಾಂಕ್‌ ಇದೀಗ ಅದನ್ನ ಪಾತಾಳಕ್ಕೆ ಅಂದ್ರೆ 2.8%ಕ್ಕೆ ಇಳಿಸಿದೆ. ಚೀನಾವನ್ನ ಹೊರತುಪಡಿಸಿ ಉಳಿದ ಪೂರ್ವ ಏಷ್ಯಾ ಹಾಗೂ ಪೆಸಿಫಿಕ್‌ ಭಾಗದ ಬೆಳವಣಿಗೆ ಇಮ್‌ಪ್ರೂವ್‌ ಆಗಿದೆ ಅಂತ ವರದಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply