ಚೀನಾ-ಪಾಕಿಸ್ತಾನ ಸ್ನೇಹದಲ್ಲಿ ಬಿರುಕು?

masthmagaa.com:

ಆರ್ಥಿಕ, ರಾಜಕೀಯ ಅಧ್ವಾನದಿಂದ ಕುಸೀತಿರೋ ಪಾಕ್‌ನ್ನ ಈಗ ಚಡ್ಡಿ ದೋಸ್ತ್‌ ಚೀನಾ ಕೂಡ ಕೈಬಿಡೋ ಹಂಗೆ ಕಾಣ್ತಿದೆ. ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯಡಿ, ಇಂಧನ, ನೀರು ನಿರ್ವಹಣೆ ಹಾಗೂ ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಚೀನಾ ನಿರಾಕರಿಸಿದೆ ಅಂತ ತಿಳಿದು ಬಂದಿದೆ. ಜೊತೆಗೆ ಪಾಕಿಸ್ತಾನ ಪ್ರಸ್ತಾಪಿಸಿರುವ ಹಲವು ಕ್ರಮಗಳಿಗೆ ಚೀನಾ ಒಪ್ಪಿಗೆ ನೀಡಿಲ್ಲ. ಗಿಲ್ಗಿಟ್-ಬಾಲ್ಟಿಸ್ತಾನ್ , ಖೈಬರ್-ಪಖ್ತುಂಖ್ವಾ, POK ಮತ್ತು ಪಾಕಿಸ್ತಾನದ ಕರಾವಳಿ ಪ್ರದೇಶಗಳಲ್ಲಿ ಗಡಿಯಾಚೆಗಿನ ಪ್ರವಾಸೋದ್ಯಮದಲ್ಲಿ ಸಹಕಾರ ನೀಡಲು ಚೀನಾ ನಿರಾಕರಿಸಿದೆ ಅಂತ ವರದಿಯಾಗಿದೆ. ಇದ್ರಿಂದ ಕುಚಿಕು ದೋಸ್ತಿಗಳ ನಡುವೆ ಬಿರುಕು ಬಿಟ್ಟಿರುವ ಸೂಚನೆ ಸಿಗ್ತಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply