ಚೀನಾದಲ್ಲಿ ದೇಶಪ್ರೇಮವನ್ನ ಹೆಚ್ಚಿಸೋದಕ್ಕೆ ಬರ್ತಾ ಇದೆ ಹೊಸ ಕಾನೂನು!

masthmagaa.com:

ದೇಶಪ್ರೇಮವನ್ನ ಹೆಚ್ಚಿಸೋ ನಿಟ್ಟಿನಲ್ಲಿ ಚೀನಾ ಹೊಸ ಕಾನೂನೊಂದನ್ನ ಪಾಸ್‌ ಮಾಡಿದೆ. ಚೀನಾದ ಮಕ್ಕಳು ಮತ್ತು ಫ್ಯಾಮಿಲಿಗಳಲ್ಲಿ ದೇಶಪ್ರೇಮವನ್ನ ಇನ್ನಷ್ಟು ಬಲಗೊಳಿಸೋ ಉದ್ದೇಶದಿಂದ ʻThe Patriotic Education Law’ ಅಂಗೀಕರಿಸಲಾಗಿದೆ. `Historical Nihilism’ ನಂತಹ ಸವಾಲನ್ನ ವಿರೋಧಿಸಿ ಅಂದ್ರೆ ಚೀನಾದ ಕಮ್ಯುನಿಸ್ಟ್‌ ಪಾರ್ಟಿ ಮೇಲೆ ಸಂದೇಹ ಪಡೋದನ್ನ ಬಿಟ್ಟು ರಾಷ್ಟ್ರೀಯ ಏಕತೆ ಕಾಪಾಡೋದು ಈ ಹೊಸ ಕಾನೂನಿನ ಉದ್ದೇಶ. ಈ ನೂತನ ಕಾನೂನು ಜನವರಿ 1, 2024 ರಿಂದ ಚೀನಾದಲ್ಲಿ ಕಾರ್ಯರೂಪಕ್ಕೆ ಬರಲಿದೆ.

-masthmagaa.com

Contact Us for Advertisement

Leave a Reply