ಟಿವಿಯಲ್ಲಿ ಕಾಣಿಸಿಕೊಂಡು ಎಲ್ಲ ವದಂತಿಗಳಿಗೂ ತೆರೆ ಎಳೆದ ಚೀನಾ ಅಧ್ಯಕ್ಷ ಜಿನ್‌ಪಿಂಗ್‌!

masthmagaa.com:

ಬಂಧನ, ಸೇನಾ ದಂಗೆ ಅಂತ ಅಷ್ಟೆಲ್ಲಾ ವದಂತಿಗಳ ನಡುವೆಯೇ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್‌ ಕಡೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ಸ್ಟೇಟ್‌ ಮೀಡಿಯಾ ವರದಿ ಮಾಡಿದೆ. ಕಮ್ಯುನಿಸ್ಟ್ ಪಕ್ಷದ ಕಳೆದೊಂದು ದಶಕದ ಆಡಳಿತ ಸಾಧನೆಯನ್ನ ಪ್ರತಿಬಿಂಬಿಸುವ ವಸ್ತುಪ್ರದರ್ಶನದಲ್ಲಿ ಜಿನ್ ಪಿಂಗ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇಶವನ್ನ ಸಮಾಜವಾದದ, ಚೈನಿಸ್‌ ದೃಷ್ಠಿಕೋನದ ಹಿನ್ನೆಲೆಯಲ್ಲಿ ಹೊಸ ವಿಜಯದ ಕಡೆಗೆ ಮುನ್ನಡೆಯೋಕೆ ಸಂಘಟಿತ ಪ್ರಯತ್ನ ಮಾಡುವಂತೆ ಚೀನಾ ಅಧ್ಯಕ್ಷರು ಕರೆಕೊಟ್ಟಿದ್ದಾರೆ ಅಂತ ಚೈನೀಸ್‌ ಮೀಡಿಯಾಗಳು ಹೇಳಿವೆ. ಅಂದ್ಹಾಗೆ ಕಳೆದ ವಾರವಷ್ಟೇ ಜಿನ್‌ ಪಿಂಗ್‌ರನ್ನ ಅರೆಸ್ಟ್‌ ಮಾಡಿ ಗೃಹ ಬಂಧನದಲ್ಲಿ ಇಟ್ಟಿದ್ದಾರೆ. ಚೀನಾದಲ್ಲಿ ಸೇನಾ ದಂಗೆ ಆಗಿದೆ ಅಂತೆಲ್ಲಾ ದೊಡ್ಡ ಮಟ್ಟದ ವದಂತಿ ಹರಿದಾಡ್ತಿತ್ತು. ಜಿನ್‌ಪಿಂಗ್‌ ಕೂಡ ಶಾಂಗೈ ಸಭೆಯ ಬಳಿಕ ಚೀನಾಗೆ ಹೋದ್ಮೇಲೆ ಹೊರಗೆ ಕಾಣಿಸಿಕೊಂಡೇ ಇರಲಿಲ್ಲ. ಇದೆಲ್ಲಾ ಆ ವದಂತಿಗಳಿಗೆ ಇನ್ನಷ್ಟು ಪುಷ್ಠಿಕೊಟ್ಟಿತ್ತು. ಆದ್ರೆ ಆ ರೀತಿ ಹೊರಗೆ ಕಾಣಿಸಿಕೊಳ್ಳದೇ ಇರೋಕೆ ಕಾರಣ ಅವರು ಕೊವಿಡ್‌ ಕ್ವಾರಂಟೈನ್‌ನಲ್ಲಿ ಇದ್ರು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply