ಚೀನಾದಲ್ಲಿ H3N8 ವೈರಸ್‌ನಿಂದ ಮಹಿಳೆ ಸಾವು! ವಿಶ್ವದಲ್ಲೇ ಮೊದಲ ಪ್ರಕರಣ!

masthmagaa.com:

ಹಕ್ಕಿಜ್ವರದ ಉಪತಳಿಯಾದ H3N8 ವೈರಸ್‌ನಿಂದ ಚೀನಾದಲ್ಲಿ ಮಹಿಳೆಯೊಬ್ರು ಮೃತಪಟ್ಟಿದ್ದಾರೆ. ಈ ಮೂಲಕ ಈ ವೈರಸ್‌ನಿಂದ ಜಗತ್ತಿನಲ್ಲೇ ಮನುಷ್ಯರೊಬ್ಬರು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ. ಹಾಗೂ ಚೀನಾದಲ್ಲಿ ಪತ್ತೆಯಾದ ಮೂರನೇ H3N8 ಕೇಸ್‌ ಇದಾಗಿದೆ ಅಂತ WHO ಹೇಳಿದೆ. ಮಹಿಳೆಗೆ ಈ ವೈರಸ್‌ ತಗುಲಿದ ಮೂಲದ ಬಗ್ಗೆ ತನಿಖೆ ನಡೆಸಲಾಗ್ತಿದ್ದು, ಅವರ ಆರೋಗ್ಯ ಕೆಡುವ ಮೊದಲು ಆಕೆ ಭೇಟಿ ನೀಡಿದ್ದ ಅಲ್ಲಿನ ಮಾರ್ಕೆಟ್‌ನ ಸ್ಯಾಂಪಲ್‌ನ್ನ ಪರೀಕ್ಷಿಸಲಾಗಿದೆ. ಈ ಪರೀಕ್ಷೆಯಲ್ಲಿ ಇನ್‌ಫ್ಲುಯೆಂಜಾ ವೈರಸ್‌ ಇರೋದು ಕನ್ಫರ್ಮ್‌ ಆಗಿದೆ. ಸೋ ಇದು ಮಹಿಳೆಗೆ ತಗುಲಿರೊ H3N8 ಸೋಂಕಿನ ಮೂಲ ಆಗಿರ್ಬೋದು ಅಂತ WHO ತಿಳಿಸಿದೆ. ಜೊತೆಗೆ ಮಹಿಳೆಯ ಸಂಪರ್ಕದಿಂದ ಬೇರಯವರಿಗೆ ಸೋಂಕು ತಗುಲಿರುವ ಕೇಸ್‌ಗಳು ಯಾವುದು ಪತ್ತೆಯಾಗಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ ಈ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯ ಹೊಂದಿಲ್ಲ. ಹಾಗಾಗಿ ಈ ವೈರಸ್‌ನಿಂದ ಉಂಟಾಗೊ ಅಪಾಯ ತೀರ ಕಡಿಮೆಯಿದೆ ಅಂತ WHO ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply