ಚೀನಾದಲ್ಲಿ ಭಾರತಕ್ಕಿಂತ 20 ಪಟ್ಟು ಹೆಚ್ಚು ಕೊರೋನಾ ಕೇಸ್​!

masthmagaa.com:

ಕೋವಿಡ್‌ ಜನಕ ಚೀನಾದಲ್ಲಿ ಕೊರೋನಾ ಆರ್ಭಟ ಮತ್ತಷ್ಟು ಜೋರಾಗಿದೆ. ನಿನ್ನೆ 20,000ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದು ಚೀನಾದಲ್ಲಿ ಪ್ಯಾಂಡಮಿಕ್‌ ಶುರಾವಾದಾಗಿಂದ ದಿನ ಒಂದ್ರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣ. ಅಂತ ದಾಖಲೆ ಬರೆದಿದೆ. ಇದ್ರಲ್ಲಿ ಶಾಂಘೈ ನಗರದಲ್ಲೇ 16,000 ಕೇಸ್​ ಪತ್ತೆಯಾಗಿದ್ದು, ಚೀನಾದ ವಾಣಿಜ್ಯ ನಗರ ಲಾಕ್‌ಡೌನ್​​ನಿಂದ ತತ್ತರಿಸ್ತಾ ಇದೆ. ಇಲ್ಲಿ ಚೀನಾ ಕಟ್ಟರ್‌ ಲಾಕ್‌ಡೌನ್‌ ನಿಯಮಗಳನ್ನ ಜಾರಿ ಮಾಡಿಡೋದ್ರಿಂದ, ತರಕಾರಿ ಮತ್ತು ಆಹಾರ ಪದಾರ್ಥಗಳನ್ನ ತರೋದು ಕೂಡ ಜನರಿಗೆ ಕಷ್ಟವಾಗಿದೆ ಅಂತ ವರದಿಯಾಗಿದೆ. ಚೀನಾದಲ್ಲಿ ಈಗ ವರದಿಯಾಗಿರೋ ಕೊರೋನಾ ಪ್ರಕರಣ ಭಾರತಕ್ಕಿಂತ 20 ಪಟ್ಟು ಹೆಚ್ಚು. ಭಾರತದಲ್ಲಿ ಡೈಲಿ ಸುಮಾರು ಸಾವಿರ ಕೇಸ್​ ಬರ್ತಿದೆ.

-masthmagaa.com

Contact Us for Advertisement

Leave a Reply