ಚೀನಾ – ಪಾಕ್‌ ದೂರ ದೂರ..! ಪಾಕ್‌ನ್ನ ನಡುನೀರಲ್ಲಿ ಕೈ ಬಿಡ್ತಾ ದೋಸ್ತ್ ಚೀನಾ?

masthmagaa.com:

ಏಷ್ಯಾದ ಎರಡು ಜಿಗರಿ ದೋಸ್ತ್‌ಗಳು ದೂರ ದೂರ ಆಗ್ತಿದ್ದಾವಾ ಅನ್ನೋ ವಿಚಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆ ಆಗ್ತಿದೆ. ಆ ಆ ಜನ್ಮ ಸ್ನೇಹಿತರು ಮತ್ಯಾರು ಅಲ್ಲ. ನಮ್ಮ ಪಕ್ಕದ ಚೀನಾ ಹಾಗೂ ಪಾಕಿಸ್ತಾನ. ಯೆಸ್ ಇವರಿಬ್ಬರ ಪ್ರೇಮದಲ್ಲಿ ಬಿರುಕು ಉಂಟಾಗಿದೆ ಅಂತ ಹೇಳಲಾಗಿದೆ. ಯಾಕಂದ್ರೆ ಇತ್ತೀಚಿಗೆ ಚೀನಾ ಆಯೋಜನೆಯಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಹಲವು ದೇಶಗಳಿಗೆ ಆಹ್ವಾನ ಕೊಟ್ಟಿದ್ರೂ ಪಕ್ಕದ ಪಾಕಿಸ್ತಾನವನ್ನ ಮಾತ್ರ ಇನ್ವೈಟ್‌ ಮಾಡಿರಲಿಲ್ಲ. ಇದು ಈಗ ಭಾರಿ ಕುತೂಹಲ ಹುಟ್ಟುಹಾಕಿದ್ದು ಪಾಕ್‌ನಿಂದ ಚೀನಾ ದೂರ ಸರಿತಿದ್ಯಾ ಅಂತ ಅನುಮಾನ ವ್ಯಕ್ತಪಡಿಸಲಾಗ್ತಿದೆ. ಆದ್ರೆ ಇವರಿಬ್ಬರ ವಿರಸಕ್ಕೆ ಕಾರಣ ಏನೂ ಅನ್ನೋದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೀತಿರೋ ಚರ್ಚೆ ಅಂದ್ರೆ ಪಾಕ್‌ನಲ್ಲಿ ಚೀನಾ ಬಂಡವಾಳಕ್ಕೆ, ಚೀನಿಯರಿಗೆ ರಕ್ಷಣೆ ನೀಡೋಕೆ ಪಾಕ್‌ ಸರ್ಕಾರ ವಿಫಲ ಆಗ್ತಿರೋದು. ಮತ್ತೆ ಚೇತರಿಸಿಕೊಳ್ಳೋಕೆ ಸಾಧ್ಯವಾಗದಷ್ಟು ಆರ್ಥಿಕ ದುಸ್ಥಿತಿಯನ್ನ ಪಾಕ್‌ ಎದುರಿಸ್ತಿರೋದು. ವ್ಯಾಪಾರಿ ಬುದ್ದಿಯ ಚೀನಾ ಪಾಕಿಗಳನ್ನ ನಂಬಿಕೊಂಡು ಅವರ ಮೇಲೆ ಬಿಲಿಯನ್‌ಗಟ್ಟಲೇ ಬಂಡವಾಳ ಸುರಿದಿದೆ. ಸೋ ಇದರಿಂದ ಮುನಿಸಿಕೊಂಡಿರೋ ಚೀನಾ ದೂರದ ಫಿಜಿ, ಇಂಡೋನೇಷ್ಯಾ, ಇರಾನ್‌, ಸೆನೆಗಲ್‌, ಈಜಿಪ್ಟ್‌, ಇಥಿಯೋಪಿಯಾದಂತಹ ದೇಶಗಳನ್ನ ಕೂಡ ಶೃಂಗಸಭೆಗೆ ಇನ್ವೆಟ್‌ ಮಾಡಿದೆ. ಆದ್ರೆ ಪಕ್ಕದಲ್ಲೇ ಇರೋ ಪಾಕಿಸ್ತಾನವನ್ನ ಮಾತ್ರ ಕರೆದಿಲ್ಲ. ಇತ್ತ ಈ ಮುಖಭಂಗಕ್ಕೆ ಪಾಕಿಸ್ತಾನ ಮತ್ತೆ ಭಾರತದ ಕಡೆಗೆ ಬೊಟ್ಟು ಮಾಡಿದ್ದು ಇದಕ್ಕೆಲ್ಲಾ ಭಾರತವೇ ಕಾರಣ ಅಂತ ಹೇಳಿದೆ. ಪಾಕ್‌ನ ವಿದೇಶಾಂಗ ಇಲಾಖೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು ನಾವು ಬ್ರಿಕ್ಸ್‌ಗೆ ಭಾಗವಹಿಸೋದನ್ನ ಅಲ್ಲಿರೋ ಒಂದು ದೇಶ ತಡೆ ನೀಡಿದೆ ಅಂತ ಪರೋಕ್ಷವಾಗಿ ಭಾರತದ ವಿರುದ್ದ ಅಸಮಾಧಾನ ಹೊರಹಾಕಿದೆ. ಅಂದ್ರೆ ಭಾರತದ ಒತ್ತಡಕ್ಕೆ ಮಣಿದು ಚೀನಾ ನಮ್ಮನ್ನ ಇನ್ವೈಟ್‌ ಮಾಡಿಲ್ಲ ಅನ್ನೋದು ಇದರ ಅರ್ಥ..

-masthmagaa.com

Contact Us for Advertisement

Leave a Reply