ಮುಯಿಝು ಪಕ್ಷ ಅಧಿಕಾರಕ್ಕೆ: ಮಾಲ್ಡೀವ್ಸ್‌ ಸಂಬಂಧ ಇನ್ನಷ್ಟು ಆಳವೆಂದ ಚೀನಾ!

masthmagaa.com:

ಮಾಲ್ಡೀವ್ಸ್‌ನ ಪಾರ್ಲಿಮೆಂಟ್‌ ಎಲೆಕ್ಷನ್‌ನಲ್ಲಿ ಹಾಲಿ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಅವ್ರ ಪಕ್ಷ ಗೆದ್ದಿದ್ದೆ ತಡ ಚೀನಾ ಫುಲ್‌ ಖುಷಿಯಾಗಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿದ್ದು ʻನಮ್ಮ ಟ್ರಡಿಷನಲ್‌ ರಿಲೇಷನ್‌ಶಿಪ್‌ನ್ನ ಮೆಂಟೆನ್‌ ಮಾಡೊ ಸಂಬಂಧ ವಿವಿಧ ಕ್ಷೇತ್ರಗಳಲ್ಲಿ ವಿನಿಮಯ ಹಾಗೂ ಸಹಕಾರವನ್ನ ವಿಸ್ತರಿಸಲು ಮಾಲ್ಡೀವ್ಸ್‌ನೊಂದಿಗೆ ಕೆಲ್ಸ ಮಾಡಲು ಚೀನಾ ಸಿದ್ದವಾಗಿದೆ ಅಂತ ಚೀನಾದ ವಿದೇಶಾಂಗ ವಕ್ತಾರ ವಾಂಗ್‌ ವೆನ್‌ಬಿನ್ ಹೇಳಿದ್ದಾರೆ. ಅಲ್ದೆ ʻಉಭಯ ದೇಶಗಳ ನಡುವಿನ ಸ್ಟಾಟಜಿಕ್‌ ಪಾಲುದಾರಿಕೆಯನ್ನ ಇನ್ನಷ್ಟು ಆಳವಾಗಿಸೊ ಗುರಿ ಹೊಂದಲಾಗಿದೆ. ಉಭಯ ದೇಶಗಳ ಜನರಿಗೆ ಇದ್ರಿಂದ ಅನೇಕ ಪ್ರಯೋಜನಗಳು ಆಗಲಿವೆ. ಹೀಗಾಗಿ ಮಾಲ್ಡೀವ್ಸ್‌ ತನ್ನ ಸಂಸತ್‌ ಚುನಾವಣೆಯನ್ನ ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ನಾವು ಅಭಿನಂದನೆ ತಿಳಿಸುತ್ತೇವೆ. ಮಾಲ್ಡೀವ್ಸ್‌ ಜನರ ಆಯ್ಕೆಯನ್ನ ನಾವು ಗೌರವಿಸುತ್ತೇವೆʼ ಅಂತ ವಾಂಗ್‌ ಹೇಳಿದ್ದಾರೆ. ಅಂದ್ಹಾಗೆ ಭಾರತ ವಿರೊಧಿ, ಚೀನಾ ಪರ ಅಧ್ಯಕ್ಷ ಅಂತ ಕರೆಸಿಕೊಂಡಿರೋ ಮುಯಿಜು ಅವರ ಪಾರ್ಟಿಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಬಹುಮತ ಸಿಕ್ಕಿತ್ತು. ಇದರಿಂದ ಮುಯಿಝುಗೆ ಪಾರ್ಲಿಮೆಂಟ್‌ನಲ್ಲೂ ಹೆಚ್ಚಿನ ಬಲಬಂದಂತಾಗಿದೆ. ಇನ್ಮುಂದೆ ಯಾವುದೇ ನಿರ್ಣಯ ತಗೊಬೇಕೂ ಅಂದ್ರೂ ಮುಯಿಝುಗೆ ಅಲ್ಲಿ ಅಡ್ಡಿಬರಲ್ಲ. ಹೀಗಾಗಿ ಚೀನಾ ಈ ರೀತಿ ರಿಯಾಕ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply