ತೈವಾನ್‌ ಸುತ್ತಲಿನ ಪ್ರದೇಶದಲ್ಲಿ ಸೇನಾ ಚಟುವಟಿಕೆ ಹೆಚ್ಚಿಸಿದ ಚೀನಾ!

masthmagaa.com:

ಚೀನಾ ತನ್ನ ಸೇನೆಯನ್ನ ಬಳಸಿ ತೈವಾನ್‌ ಮೇಲೆ ಆಕ್ರಮಣ ಮಾಡೋ ಎಲ್ಲಾ ಲಕ್ಷಣಗಳು ಕಾಣ್ತಾ ಇವೆ. ಇತ್ತೀಚಿಗಷ್ಟೆ ತೈವಾನ್‌ ಗಡಿಯಲ್ಲಿ ಚೀನಾದ ಸೇನೆ ಸಮರಾಭ್ಯಾಸ ಮಾಡಿತ್ತು. ಇದೀಗ ಮತ್ತೆ ತೈವಾನ್‌ನ ಸುತ್ತಲಿನ ಸಮುದ್ರ ಮತ್ತು ವಾಯು ಪ್ರದೇಶದಲ್ಲಿ ಯುದ್ಧಾಭ್ಯಾಸ ಮಾಡಿರೋದಾಗಿ ಸ್ವತಃ ಚೀನಾದ ಸೇನೆ ಹೇಳಿದೆ. ಅಂದ್ಹಾಗೆ ಸೇನೆಯನ್ನ ಬಳಸಿ ತೈವಾನ್‌ ಅನ್ನ ವಶಪಡಿಸಿಕೊಳ್ಳೋಕೆ ಚೀನಾ ರೆಡಿಯಿದೆ ಅಂತ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ರು. ಕಳೆದ ತಿಂಗಳಿನಿಂದ ಚೀನಾದ ಮಿಲಿಟರಿ ಕಾರ್ಯಾಚರಣೆಗಳು ಹೆಚ್ಚಾಗ್ತಿರೋದನ್ನ ನೋಡಿದ್ರೆ ಚೀನಾ ತೈವಾನ್‌ ಮೇಲೆ ಆಕ್ರಮಣ ಮಾಡ್ಬೋದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply