ಚಂದ್ರನ ಡಾರ್ಕ್‌ ಸೈಡ್‌ಗೆ ರೋಬೋಟಿಕ್‌ ಸ್ಪೇಸ್‌ಕ್ರಾಫ್ಟ್‌ ಇಳಿಸಲಿದೆ ಚೀನಾ!

masthmagaa.com:

ಚಂದ್ರನ ಡಾರ್ಕ್‌ ಸೈಡ್‌ ಅಥ್ವಾ ಮತ್ತೊಂದು ಬದಿ ಈಗ ಸದಾಶಿವ ನಗರದ ಫ್ಲ್ಯಾಟ್‌ ಇದ್ದಂತೆ. ಹೈ ಡಿಮ್ಯಾಂಡ್‌ ಇದೆ… ಭಾರತದ ಚಂದ್ರಯಾನ-3 ಇಳಿದ ಈ ಭಾಗಕ್ಕೆ ಇದೀಗ ಚೀನಾ ರೋಬೋಟಿಕ್‌ ಸ್ಪೇಸ್‌ಕ್ರಾಫ್ಟ್‌ ಇಳಿಸೋಕೆ ಮುಂದಾಗಿದೆ. ಡಾರ್ಕ್‌ ಸೈಡ್‌ ಎಕ್ಸ್‌ಪ್ಲೋರ್‌ ಮಾಡೋ ಈ ಸ್ಪೇಸ್‌ಕ್ರಾಫ್ಟ್‌ನ ಚೀನಾ ಚಾಂಗ್‌ 6 (Chang’e 6) ಮಿಷನ್‌ನಲ್ಲಿ ಸದ್ಯದಲ್ಲೇ ಲಾಂಚ್‌ ಮಾಡುತ್ತೆ ಎನ್ನಲಾಗಿದೆ. ಚೀನಾ ಚಂದ್ರನ ದಕ್ಷಿಣ ದ್ರುವಕ್ಕೆ ಗಗನಯಾತ್ರಿಗಳನ್ನ ಕಳಿಸ್ಬೇಕು ಅನ್ನೋ ಮಹತ್ವದ ಯೋಜನೆ ಇಟ್ಕೊಂಡಿದೆ. ಈಗ ಈ ಯೋಜನೆಯ ಭಾಗವಾಗಿ ಚಾಂಗ್‌ 6 ಮಿಷನ್‌ ಇರಲಿದೆ. ಇನ್ನು ಈ ಮಿಷನ್‌ನಲ್ಲಿ ಚೀನಾ ಜೊತೆಗೆ ಫ್ರಾನ್ಸ್‌, ಇಟಲಿ, ಸ್ವೀಡನ್‌ ಮತ್ತು ಪಾಕಿಸ್ತಾನದ ಪೇಲೋಡ್‌ಗಳು ಕೂಡ ಹೋಗಲಿವೆ.

-masthmagaa.com

Contact Us for Advertisement

Leave a Reply