ಜನಸಂಖ್ಯೆ ಹೆಚ್ಚಿಸಲು ಮುಂದುವರೆದ ಚೀನಾದ ಇನ್ನಿಲ್ಲದ ಕಸರತ್ತು!

masthmagaa.com:

ಚೀನಾದಲ್ಲಿ ಯುವಕರ ಸಂಖ್ಯೆ ಕ್ಷೀಣಿಸುತ್ತಿದ್ದು, ಜನನ ದರವನ್ನ ಹೆಚ್ಚಿಸಲು ಹಲವು ಯೋಜನೆಗಳನ್ನ ಜಾರಿಗೆ ತರ್ತಿದೆ. ಇದೀಗ ಅಲ್ಲಿನ ಮಹಿಳೆಯರು ಮದುವೆಯಾಗುವಂತೆ ಹಾಗೂ ಮಕ್ಕಳನ್ನ ಹೊಂದುವಂತೆ ಪ್ರೋತ್ಸಾಹಿಸಲು 20 ನಗರಗಳಲ್ಲಿ ನೂತನ ಯೋಜನೆಯನ್ನ ಲಾಂಚ್‌ ಮಾಡಲು ಮುಂದಾಗಿದೆ. ಮದುವೆಯನ್ನು ಉತ್ತೇಜಿಸುವುದು, ಸರಿಯಾದ ವಯಸ್ಸಿನಲ್ಲಿ ಮಕ್ಕಳನ್ನ ಹೊಂದುವುದು, ಮಕ್ಕಳನ್ನು ಬೆಳೆಸುವ ಜವಾಬ್ದಾರಿಗಳನ್ನು ಪೋಷಕರು ಶೇರ್‌ ಮಾಡಿಕೊಳ್ಳಲು ಪ್ರೋತ್ಸಾಹ ನೀಡೋದು ಈ ಯೋಜನೆಯ ಉದ್ಧೇಶವಾಗಿದೆ. ಅಂದ್ಹಾಗೆ ಚೀನಾದ ಮಹಿಳೆಯರಿಗೆ ಮದುವೆಯಾಗಲು ಮತ್ತು ಮಕ್ಕಳನ್ನ ಹೊಂದಲು ಪ್ರೋತ್ಸಾಹಿಸಲು ಅಲ್ಲಿನ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಸಂಸ್ಥೆ ಈ ಯೋಜನೆಯನ್ನ ಜಾರಿಗೊಳಿಸುತ್ತಿದೆ. ಈ ಮೂಲಕ ಚೀನಾದಲ್ಲಿ ಜನಸಂಖ್ಯೆಯ ʻnew-eraʼ ಸೃಷ್ಟಿಸಲು ಚೀನಾ ಯೋಜಿಸುತ್ತಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply