ಚೀನಾದಲ್ಲಿ ಪ್ರತಿದಿನ 36 ಸಾವಿರ ಕೋವಿಡ್‌ ಸಾವು! ತುಂಬಾ ಚಿಂತೆ ಮಾಡ್ತಿದ್ದಾರಂತೆ ಜಿನ್‌ ಪಿಂಗ್!

masthmagaa.com:

ಚೀನಾದಲ್ಲಿ ಕೋವಿಡ್‌ ಕೇಸ್‌ಗಳು ಕಾಡ್ಗಿಚ್ಚಿನಂತೆ ಹರಡ್ತಾ ಇದ್ದು,ಅದರಿಂದ ಆಗ್ತಿರೋ ಸಾವುಗಳ ಬಗ್ಗೆ ದಿನಕ್ಕೊಂದು ಆಘಾತಕಾರಿ ಮಾಹಿತಿ ಬರ್ತಿದೆ. ಕಳೆದ ವಾರವಷ್ಟೇ ಕೇವಲ ಒಂದೇ ತಿಂಗಳಲ್ಲಿ 60 ಸಾವಿರ ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಅಂತ ಖುದ್ದು ಚೀನಾ ಸರ್ಕಾರವೇ ಅನೌನ್ಸ್‌ ಮಾಡಿತ್ತು. ಇದೀಗ ಚೀನಾದಲ್ಲಿ ಚೈನೀಸ್ ಹೊಸ ವರ್ಷ ಆದ್ಮೇಲೆ ಅಂದ್ರೆ ಜನವರಿ 22ರ ನಂತರ ಪ್ರತಿದಿನ ಕನಿಷ್ಠ ಅಂದ್ರೂ 36 ಸಾವಿರ ಜನ ಕೋವಿಡ್‌ನಿಂದ ಸಾವನ್ನಪ್ತಾರೆ ಅಂತ ವರದಿಯೊಂದು ಹೇಳಿದೆ. ಜನವರಿ 22ರ ಹೊಸ ವರ್ಷದ ಸಂಭ್ರಮಕ್ಕಾಗಿ ಎಲ್ಲರೂ ಗುಂಪು ಗೂಡೋದು ನಗರ ಪ್ರದೇಶದಲ್ಲಿ ಇರೋರೆಲ್ಲಾ ಹಳ್ಳಿಗೆ ಹೋಗೋದು ಜಾಸ್ತಿ ಆಗುತ್ತೆ. ಇದರಿಂದ ಕೊವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಈ ತಿಂಗಳ ಅಂತ್ಯದಿಂದ ದಿನಕ್ಕೆ 36 ಸಾವಿರ ಮಂದಿ ಕೊವಿಡ್‌ನಿಂದ ಪ್ರಾಣಕಳೆದುಕೊಳ್ಳಲಿದ್ದಾರೆ ಅಂತ ಹೇಳಲಾಗ್ತಿದೆ..ಇನ್ನು ಈ ಕಡೆ ಚೀನಾದಲ್ಲಿ ನಡೀತಿರೋ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚೀನಾದ ಸುಪ್ರೀಂ ಲೀಡರ್‌ ಶಿ ಜಿನ್‌ ಪಿಂಗ್‌ ತುಂಬಾ ಆತಂಕದಲ್ಲಿದ್ದಾರೆ. ತುಂಬಾ ಚಿಂತೆ ಮಾಡ್ತಿದ್ದಾರೆ ಅಂತ ಸ್ವತಃ ಚೀನಾದ ಸರ್ಕಾರಿ ಮಾಧ್ಯಮ ಕ್ಸಿನುವಾ ವರದಿ ಮಾಡಿದೆ. ಕೋವಿಡ್‌ ಪ್ರಕರಣಗಳು ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ತುಂಬಾ ವೇಗವಾಗಿ ಹರಡ್ತಾ ಇವೆ. ಇದರಿಂದ ಚೀನಾದ ಪರಿಸ್ಥಿತಿ ತುಂಬಾ ಹದಗೆಡ್ತಾಯಿದೆ. ಈ ಡೆವಲಪ್‌ಮೆಂಟ್‌ ಕುರಿತು ಚೀನಾ ಅಧ್ಯಕ್ಷರು ಆತಂಕ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ʻಗ್ರಾಮೀಣ ಪ್ರದೇಶಗಳಲ್ಲಿ ವೈರಸ್‌ಗೆ ಹೆಚ್ಚು ಗುರಿಯಾಗುವವರಿಗೆ ವೈದ್ಯಕೀಯ ನೆರವು ತುಂಬಾ ವೇಗವಾಗಿ ಸಿಗಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಹೊಸ ಹಂತವನ್ನು ಪ್ರವೇಶಿಸಿದೆ, ನಾವು ಇನ್ನೂ ಹೆಚ್ಚಿನ ಪ್ರಯತ್ನಗಳನ್ನ ಮಾಡಬೇಕಾದ ಸಿಚುವೇಶನ್‌ನಲ್ಲಿ ಇದ್ದೀವಿʼ ಅಂತ ಜಿನ್‌ಪಿಂಗ್‌ ಹೇಳಿರೋದಾಗಿ ಈ ಸುದ್ದಿ ಸಂಸ್ಥೆ ಬರೆದಿದೆ. ಜೊತೆಗೆ ಹೊಸ ವರ್ಷಕ್ಕೆ ಅಂತ ಬುಧವಾರ ಒಂದೇ ದಿನ 3 ಕೋಟಿ ಚೀನಾದ ನಗರ ಪ್ರದೇಶದ ಜನ ತಮ್ಮ ತಮ್ಮ ಊರಿಗೆ ಪ್ರಯಾಣ ಮಾಡಿದ್ದಾರೆ ಅಂತ ಹೇಳಿದೆ. ಇನ್ನು ಮತ್ತೊಂದು ವರದಿಯ ಪ್ರಕಾರ ಚೀನಾ ಸರ್ಕಾರ ನೀಡ್ತಿರೋ ಮಾಹಿತಿಗಳಿಗಿಂತ ಅಲ್ಲಿ ಎಷ್ಟೋ ಪಟ್ಟು ಜಾಸ್ತಿ ಹಾನಿಯಾಗಿದೆ ಅಂತ ಹೇಳಲಾಗ್ತಿದೆ. ಇನ್ನು ಇಲ್ಲಿ ಈ ಕಥೆ ಆದ್ರೆ ಆ ಕಡೆ ಚೀನಾದ ಕಂಟ್ರೋಲ್‌ನಲ್ಲಿದ್ದು ಕೊಂಡು ತಾನು ಸ್ವಾಯತ್ತ ಪ್ರದೇಶ ಅನ್ಕೊಳ್ಳೊ ಹಾಂಗ್‌ಕಾಂಗ್‌ನಲ್ಲಿ ಕೋವಿಡ್ ರೂಲ್ಸ್‌ನಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸೋಕೆ‌ ನಾವು ಪ್ರಯತ್ನಿಸುತ್ತಿರುವುದರಿಂದ ಕೋವಿಡ್ ಸೋಂಕಿತ ಜನರನ್ನು ಪ್ರತ್ಯೇಕವಾಗಿ ಇರಿಸಲು, ಅಂದ್ರೆ ಕೊವಿಡ್‌ ಬಂದವರನ್ನ ಐಸೋಲೇಷನ್‌ನಲ್ಲಿ ಇರಿಸೋ ಆದೇಶವನ್ನ ತೆಗೆದುಹಾಕಿದ್ದೇವೆ…ಕೊರೊನಾ ಬಂದವರು ಎಲ್ಲಿಬೇಕಾದ್ರೂ ಓಡಾಡಬೋದು ಅಂತ ಹಾಂಗ್‌ ಕಾಂಗ್‌ ಸರ್ಕಾರ ಅನೌನ್ಸ್‌ ಮಾಡಿದೆ. ವಿಶ್ವದ ಮೇಜರ್ ಎಕಾನಾಮಿ ಅಂತ ಕರೆಸಿಕೊಳ್ಳುವ ಹಾಂಗ್‌ಕಾಂಗ್‌ನಲ್ಲಿ ಕಳೆದ ಕೆಲದಿನಗಳಿಂದ ಜೀರೋ ಕೋವಿಡ್‌ ಅನ್ಕೊಂಡು ಆರ್ಥಿಕತೆ ಹಳ್ಳ ಹಿಡಿದಿದೆ. ಹೀಗಾಗಿ ಮೇನ್‌ ಲ್ಯಾಂಡ್‌ ಚೀನಾನೇ ಕೊವಿಡ್‌ ನಿಯಮಗಳನ್ನ ಗಾಳಿಗೆ ತೂರಿದ್ದು ಅದರ ಕಂಟ್ರೋಲ್‌ನಲ್ಲಿರೋ ಹಾಂಗ್‌ಕಾಂಗ್‌ನಲ್ಲೂ ಸಹ ಈಗ ರೂಲ್ಸ್‌ ತೆಗೆದುಹಾಕಲಾಗಿದೆ.

-masthmagaa.com

Contact Us for Advertisement

Leave a Reply