ಭಾರತ, ಅಮೆರಿಕ ವಿರೋಧದ ನಡುವೆಯು ಲಂಕಾದಲ್ಲಿ ಚೀನಾ ರಿಸರ್ಚ್‌ ಹಡಗಿನಿಂದ ಸಂಶೋಧನೆ!

masthmagaa.com:

ಭಾರತದ ಭದ್ರತೆಗೆ ಬೆಲೆ ಕೊಡೋದಾಗಿ ಹೇಳೊ ಲಂಕಾ ಸರ್ಕಾರ ಚೀನಾ ವಿಷಯದಲ್ಲಿ ಮಾತ್ರ ತನ್ನ ಅಸಹಾಯಕತೆ ತೋರಿದೆ. ಭಾರತ, ಅಮೆರಿಕಗಳಲ್ಲಿ ಅಸಮಾಧಾನ ಇದ್ರು ಸಹ ಚೀನಾದ ಶಿ ಯಾನ್‌-6 ರಿಸರ್ಚ್‌ ಹಡಗು ಅಕ್ಟೋಬರ್‌ 30, 31ರಲ್ಲಿ ಎರಡು ದಿನಗಳ ರಿಸರ್ಚ್‌ ನಡೆಸಿದೆ. ಲಂಕಾದ ಸಮುದ್ರ ಸಂಶೋಧನಾ ಏಜೆನ್ಸಿ ಸಹಯೋಗದಲ್ಲಿ ಕೊಲಂಬೊ ಬಳಿಯ ಪಶ್ಚಿಮ ಕರಾವಳಿಯಲ್ಲಿ ಈ ಸಂಶೋಧನಾ ಅಭ್ಯಾಸ ನಡೆದಿದೆ. ಅಂದ್ಹಾಗೆ ಕಳೆದ ಒಂದು ವರ್ಷದಲ್ಲಿ ಎರಡನೇ ಬಾರಿ ಈ ರಿಸರ್ಚ್‌ ಹಡಗು ಲಂಕಾದಲ್ಲಿ ಬೀಡು ಬಿಟ್ಟಿರೋದು. ಈ ಹಡಗಿನಿಂದ ಭಾರತದ ಭದ್ರತೆಗೆ ಏನಾದ್ರು ತೊಂದರೆ ಆಗ್ಬೋದಾ ಅನ್ನೊ ಮಾಹಿತಿ ಇಲ್ಲ. ಭಾರತ ಸಹ ಅಷ್ಟು ಅಗ್ರೆಸಿವ್‌ ಆಗಿ ಪ್ರತಿಕ್ರಿಯಿಸಿಲ್ಲ. ‌ಆಗಸ್ಟ್‌ನಲ್ಲಿ ಬಂದಿದ್ದ ಯುವಾನ್ ವಾಂಗ್-5‌ ಸ್ಪೈ ಹಡಗಿಗೆ ಭಾರತ ತುಂಬಾ ಸ್ಟ್ರಾಂಗಾಗಿ ವಿರೋಧಿಸಿತ್ತು. ಅಲ್ಲದೆ ಈಗ್ಲೂ ಭಾರತೀಯ ಹೈ ಕಮಿಷನರ್‌ ಲಂಕಾ ಅಧಿಕಾರಿಗಳೊಡನೆ ನಿರಂತರ ಸಂಪರ್ಕದಲ್ಲಿರೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply