ತೈವಾನ್‌ ಸುತ್ತಲೂ ತನ್ನ ಕಣ್ಗಾವಲು ಪಡೆಯನ್ನ ಬಲಪಡಿಸಿದ ಚೀನಾ!

masthmagaa.com:

ತೈವಾನ್‌ ಮೇಲೆ ಕಣ್ಣಿಟ್ಟು…ಅದನ್ನ ತನ್ನ ತೆಕ್ಕೆಗೆ ಹಾಕೋಕೆ ಕುತಂತ್ರ ನಡೆಸ್ತಿರೋ ಚೀನಾ ಇದೀಗ ತೈವಾನ್‌ನ ದ್ವೀಪ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ. ತೈವಾನ್‌ ನಿಯಂತ್ರಿತ ದ್ವೀಪ ಪ್ರದೇಶದ ಸುತ್ತ ಚೀನಾ ತನ್ನ ಕಣ್ಗಾವಲು ಪಡೆಯನ್ನ ಬಲಪಡಿಸಿದೆ ಅಂತ ಇದೀಗ ವರದಿಯಾಗಿದೆ. ಇತ್ತೀಚಿಗೆ ತೈವಾನ್‌ ದ್ವೀಪದ ಸಮೀಪ ಸ್ಪೀಡ್‌ ಬೋಟ್‌ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಚೀನಿ ಪ್ರಜೆಗಳು ಸಾವನ್ನಪ್ಪಿ, ಇನ್ನಿಬ್ಬರು ಬಚಾವಾಗಿದ್ರು. ಈ ಘಟನೆ ಬಳಿಕ ತೈವಾನ್‌ ದ್ವೀಪದ ಸುತ್ತ ಚೀನಾ ತನ್ನ ಕಣ್ಗಾವಲು ಪಡೆಯನ್ನ ಸ್ಟ್ರಾಂಗ್‌ ಮಾಡಿದೆ. ಅಂದ್ಹಾಗೆ ಪದೇ ಪದೇ ತೈವಾನ್‌ ನಮ್ಮ ಸ್ವಂತ ಪ್ರದೇಶ ಅಂತ ಹೇಳೋ ಚೀನಾ ತನ್ನ ಪ್ರಜೆಗಳ ಸಾವಿಗೆ ತೈವಾನ್‌ ಕಾರಣ ಅಂತ ಆರೋಪಿಸಿತ್ತು. ಆದ್ರೆ ಇದೀಗ ಈ ನೆಪ ಒಡ್ಡಿ ತನ್ನ ಪ್ರಜೆಗಳ ಸುರಕ್ಷತೆ ಕಾಪಾಡಲು ತನ್ನ ಕಣ್ಗಾವಲು ಪಡೆಯನ್ನ ಸ್ಟ್ರಾಂಗ್‌ ಮಾಡಿದ್ದೇವೆ ಅಂತ ಚೀನಾ ಹೇಳ್ಕೊಂಡಿದೆ.

-masthmagaa.com

Contact Us for Advertisement

Leave a Reply