ಚೀನಾ: ಯುವಜನತೆಯಲ್ಲಿ ಹೆಚ್ಚಿದ ನಿರುದ್ಯೋಗ ಸಮಸ್ಯೆ

masthmagaa.com:

ಕೋವಿಡ್‌ನಿಂದ ಆರ್ಥಿಕವಾಗಿ ಕುಗ್ಗಿ ಈಗ ಚೇತರಿಕೆ ಕಾಣ್ತಿರೋ ಚೀನಾದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗ್ತಿದೆ. ನಿರುದ್ಯೋಗ ಕುರಿತು ಹೊಸ ವರದಿಯೊಂದು ರಿಲೀಸ್‌ ಆಗಿದ್ದು, ದಾಖಲೆಯ ಮಟ್ಟದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಅಂತ ತಿಳಿದು ಬಂದಿದೆ. 16 ರಿಂದ 24 ವರ್ಷದ ಯುವ ಜನತೆಯಲ್ಲಿ ನಿರುದ್ಯೋಗ ಪ್ರಮಾಣ ಮೇನಲ್ಲಿ 20.8%ಗೆ ಏರಿಕೆಯಾಗಿದೆ. ಈ ಪ್ರಮಾಣ ಏಪ್ರಿಲ್‌ನಲ್ಲಿ 20.4% ಇತ್ತು ಅಂತ ಅಲ್ಲಿನ ನ್ಯಾಷನಲ್‌ ಬ್ಯುರೋ ಆಫ್‌ ಸ್ಟಾಟಿಸ್ಟಿಕ್ಸ್‌ ಹೇಳಿದೆ.

-masthmagaa.com

Contact Us for Advertisement

Leave a Reply