ಪಕ್ಷದ 20ನೇ ಪಂಚವಾರ್ಷಷಿಕ ಸಭೆಯಲ್ಲಿ ಹೈಡ್ರಾಮ: ಸಭೆಯಿಂದ ಮಾಜಿ ಅಧ್ಯಕ್ಷ ಹೊರಗೆ

masthmagaa.com:

ಕಳೆದ ಭಾನುವಾರದಿಂದ ಅತ್ಯಂತ ಬಂದೋಬಸ್ತ್‌ನಲ್ಲಿ ನಡೆಯುತ್ತಿದ್ದ ಕಮ್ಯುನಿಸ್ಟ್‌ ಪಕ್ಷದ 20ನೇ ಪಂಚವಾರ್ಷಷಿಕ ಸಭೆ ಇಂದು ಅಂತ್ಯಗೊಂಡಿದೆ. ಸಭೆಯ ಕ್ಲೋಸಿಂಗ್‌ ಸೆರಮನಿಯಲ್ಲಿ ಭಾರಿ ಡ್ರಾಮಾ ಒಂದು ನಡೆದಿದೆ. ಚೀನಾದ ಮಾಜಿ ಅಧ್ಯಕ್ಷ ಹು ಜಿನ್‌ಟಾವ್ ಅವ್ರನ್ನ ಬಲವಂತವಾಗಿ ಸಭೆಯಿಂದ ಹೊರಹಾಕಲಾಗಿದೆ. ಇದರ ವಿಡಿಯೋ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಜಿನ್‌ಪಿಂಗ್‌ರ ಪಕ್ಕದಲ್ಲಿ ಕುಳಿತಿದ್ದ 79 ವರ್ಷದ ಜಿನ್‌ಟಾವ್‌ ಅವ್ರನ್ನ ಇಬ್ಬರು ಮ್ಯಾನೇಜ್ಮೆಂಟ್‌ ಅಧಿಕಾರಿಗಳು ಬಂದು ಹೊರಗೆ ಕಳಿಸಿದ್ದಾರೆ. ಇನ್ನು ಈ ಜಿನ್‌ಟಾವ್‌ ಬಗ್ಗೆ ಹೆಳಬೇಕಂದ್ರೆ, ಷಿ ಜಿನ್‌ಪಿಂಗ್‌ರ ಮೊದಲು ಚೀನಾದ ಅಧ್ಯಕ್ಷರಾಗಿದ್ರು. 2003 ರಿಂದ 2013ರವರೆಗೆ ಒಟ್ಟು 2 ಅವಧಿಗಳ ಕಾಲ ಚೀನಾ ಆಡಳಿತವನ್ನ ನಡೆಸಿದ್ರು. ಇವರು ಜಿನ್‌ಪಿಂಗ್‌ರ ಅಪೋಸಿಟ್‌. ಅಂದ್ರೆ ಸರ್ವಾಧಿಕಾರಿಯಾಗಿರದೇ ಚೀನಾವನ್ನ ಶಾಂತಿಯುತವಾಗಿ ಮುನ್ನಡೆಸಿದ್ರು. ಅಂತಾರಾಷ್ಟ್ರೀಯ ಸಂಬಂಧಗಳನ್ನ ಕೂಡ ರಾಜತಾಂತ್ರಿಕತೆಯ ಮೂಲಕ ಸಾಫ್ಟ್‌ ಆಗಿ ನಿಭಾಯಿಸಿದ್ರು. ಇವರ ಅವಧಿಯಲ್ಲಿ ಆಫ್ರಿಕಾ, ಲ್ಯಾಟಿನ್‌ ಅಮೆರಿಕ ಹಾಗೂ ಇತರ ಅಭಿವೃದ್ದಿಶೀಲ ದೇಶಗಳ ಮೇಲೆ ಚೀನಾದ ಇನ್‌ಫ್ಲುಯನಸ್ಸ್‌ ಜಾಸ್ತಿ ಆಗಿತ್ತು. ಇವರ ಟೈಮಲ್ಲಿ ಭಾರತ-ಚೀನಾ ಸಂಬಂಧ ಕೂಡ ಉತ್ತಮ ರೀತಿಯಲ್ಲಿತ್ತು. LAC ಗಡಿಯಲ್ಲೂ ಯಾವುದೇ ತಕರಾರು ಇಲ್ಲದೇ ಶಾಂತಿ ನೆಲೆಸಿತ್ತು. ಆದ್ರೆ ಇವರನ್ನ ಈ ರೀತಿ ಯಾಕೆ ಇದ್ದಕ್ಕಿದ್ದಂತೆ ಸಭೆಯಿಂದ ಹೊರಹಾಕಲಾಯ್ತು ಅನ್ನೊದಕ್ಕೆ ಕಾರಣ ಲಭ್ಯವಾಗಿಲ್ಲ. ಇನ್ನೊಂದ್‌ ಕಡೆ ಸಭೆಯಲ್ಲಿ, ಪಾರ್ಟಿ ಸೆಂಟ್ರಲ್‌ ಕಮೀಟಿಯಲ್ಲಿ ಷಿಜಿನ್‌ ಪಿಂಗ್‌ರ ಕೋರ್‌ ಪೊಸಿಷನ್‌ನ್ನ ಅಪ್ರೂವ್‌ ಮಾಡಲಾಗಿದೆ. ಅಂದ್ರೆ ಪಕ್ಷದ ಮುಖ್ಯಸ್ಥನಾಗಿ ಷಿ ಜಿನ್‌ಪಿಂಗ್‌ರ ಸ್ಥಾನವನ್ನ ಭದ್ರಪಡಿಸಲಾಗಿದೆ. ಅಲ್ಲದೇ ಚೀನಾದ ಮೇಲೆ ಪಕ್ಷದ ಅಧಿಕಾರವನ್ನ ಕೂಡ ಗಟ್ಟಿಗೊಳಿಸಲಾಗಿದೆ. ಕಮ್ಯುನಿಸ್ಟ್‌ ಪಕ್ಷದ ಸಂವಿಧಾನಕ್ಕೆ ಕೆಲ ತಿದ್ದುಪಡಿಗಳನ್ನ ತರೋ ಮೂಲಕ ಈ ಬದಲಾವಣೆಗಳನ್ನ ಮಾಡಲಾಗಿದೆ. ಈ ಸಭೆಯಲ್ಲಿ ಷಿಜಿನ್‌ ಪಿಂಗ್‌ರನ್ನ ಮಾವೋ ರೀತಿ ಪ್ರೊಜೆಕ್ಟ್‌ ಮಾಡೋಕೆ ʻಮಾವೋ ವಿಚಾರಧಾರೆಗಳʼ ಜೊತೆಗೆ ʻಷಿ ಜಿನ್‌ಪಿಂಗ್‌ ವಿಚಾರಧಾರೆಗಳುʼ ಅಂತ ಸಂವಿಧಾನಕ್ಕೆ ಸೇರಿಸಬಹುದು ಅಂತ ಹೇಳಲಾಗಿತ್ತು, ಆದ್ರೆ ಆ ರೀತಿ ಮಾಡಿಲ್ಲ. ಇನ್ನು ಈ ವೇಳೆ ಈ ನೂತನ ಸೆಂಟ್ರಲ್‌ ಕಮೀಟಿಯನ್ನ ರಚಿಸಲಾಗಿದ್ದು ಇದ್ರಿಂದ ಪ್ರೀಮಿಯರ್‌ ಲಿ ಕೆಕಿಯಾಂಗ್‌ ಹಾಗೂ ಸ್ಟ್ಯಾಂಡಿಂಗ್‌ ಕಮೀಟಿ ಮೆಂಬರ್‌ ವಾಂಗ್‌ ಯಾಂಗ್‌ ಅವ್ರನ್ನ ಹೊರಗಿಡಲಾಗಿದೆ.

-masthmagaa.com

Contact Us for Advertisement

Leave a Reply