ಗಲ್ಫ್‌ ರಾಷ್ಟ್ರಗಳ ನಾಯಕರ ಜೊತೆ ಜಿನ್‌ಪಿಂಗ್‌ ಮಾತುಕತೆ! ಸಭೆಯಲ್ಲಿ ಚರ್ಚಿಸಿದ್ದೇನು?

masthmagaa.com:

ಅಮೆರಿಕದ ಜೊತೆಗಿನ ತಿಕ್ಕಾಟದ ನಡುವೆಯೇ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್‌ ಅಮೆರಿಕದ ಒಂದು ಕಾಲದ ಪರಮ ಮಿತ್ರ ಸೌದಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಆ ಭಾಗದ ಗಲ್ಫ್‌ ರಾಷ್ಟ್ರಗಳ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಭದ್ರತೆ ಹಾಗೂ ಇಂಧನ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಅಂತ ಹೇಳಲಾಗಿದೆ. ಜೊತೆಗೆ ಅಮೆರಿಕದ ಜೊತೆಗಿನ ಸಮಸ್ಯೆಗಳನ್ನ ಕೂಡ ಹೈಲೈಟ್‌ ಮಾಡಲಾಗಿದೆ. ಚೀನಾ-ಅರಬ್‌ ನಾಯಕರ ಸಭೆಯ ಕೊನೆಯ ದಿನದಂದು 6 ಸದಸ್ಯರ ಗಲ್ಫ್‌ ಸಹಕಾರ ಮಂಡಳಿ (GCC) ಜೊತೆ ಜಿನ್‌ಪಿಂಗ್‌ ಸಭೆ ನಡೆಸಿದ್ದಾರೆ. ಈ ವೇಳೆ GCC ದೇಶಗಳ ಭದ್ರತೆಯನ್ನ ಕಾಪಾಡುವಲ್ಲಿ ಚೀನಾ ತನ್ನ ಸಪೋರ್ಟ್‌ನ್ನ ಮುಂದುವರೆಸುತ್ತೆ ಅಂತ ಜಿನ್‌ಪಿಂಗ್‌ ಹೇಳಿದ್ದಾರೆ. ಜೊತೆಗೆ GCC ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನ ಚೀನಾ ಆಮದು ಮಾಡಿಕೊಳ್ಳುತ್ತೆ. LNG ಸೇರಿದಂತೆ ಇತರ ಇಂಧನಗಳ ಸಹಕಾರವನ್ನ ವಿಸ್ತರಿಸುತ್ತೆ ಅಂತ ಮಾತುಕೊಟ್ಟಿದ್ದಾರೆ. ಇನ್ನು ಮೂರು ದಿನಗಳ ಪ್ರವಾಸದಲ್ಲಿ ಜಿನ್‌ಪಿಂಗ್‌ ಸುಮಾರು 30 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 2.46 ಲಕ್ಷ ಕೋಟಿ ರೂಪಾಯಿಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಅಂತ ಸೌದಿ ಮೀಡಿಯಾ ವರದಿ ಮಾಡಿದೆ. ಈ ಮೂಲಕ ಗಲ್ಫ್‌ ದೇಶಗಳ ಜೊತೆಗೆ ಫ್ರೆಂಡ್‌ಶಿಪ್‌ ಬಿಲ್ಡ್‌ ಮಾಡಿ ಬೈಡೆನ್‌ ಅವರ ಅಮೆರಿಕದ ಪ್ರಭಾವವನ್ನ ಕಡಿಮೆ ಮಾಡೋಕೆ ಜಿನ್‌ಪಿಂಗ್‌ ದೊಡ್ಡ ಹೆಜ್ಜೆ ಇಟ್ಟಿದ್ದಾರೆ ಅಂತ ವಿಶ್ಲೇಷಣೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply