ಅಕ್ರಮವಾಗಿ ಚೀನಾಗೆ ಎಂಟ್ರಿ ಕೊಟ್ಟಿದೆ ಅಮೆರಿಕ ನೌಕಾ ಹಡಗು: ಚೀನಾ

masthmagaa.com:

ಅಮೆರಿಕದ ನೌಕಾ ಹಡಗು ಅಕ್ರಮವಾಗಿ ಚೀನಾದ ದಕ್ಷಿಣ ಭಾಗದ ಕರಾವಳಿಯನ್ನ ನುಗ್ಗಿದೆ ಅಂತ ಚೀನಾ ಆರೋಪಿಸಿದೆ. ವಿವಾದಿತ ದಕ್ಷಿಣ ಚೀನಾದ ಸಮುದ್ರದ ಎರಡನೇ ಥಾಮಸ್‌ ಶೋಲ್‌ ಬಳಿ ಅಮೆರಿಕದ ನೌಕಾ ಹಡಗು ಎಂಟ್ರಿ ಕೊಟ್ಟು ಅಡ್ಡಿ ಮಾಡಿದೆ. ಜೊತೆಗೆ ಚೀನಾದ ಸಾರ್ವ ಭೌಮತ್ವವನ್ನ ಉಲ್ಲಂಘಿಸಿದೆ ಅಂತ ಚೀನಾ ಹೇಳ್ತಿದೆ. ಈ ಕುರಿತು ಮಾತನಾಡಿರೋ China’s Southern Theater of Operationsನ ವಕ್ತಾರ, ʻಅಮೆರಿಕ ಈ ರೀತಿ ಅಕ್ರಮವಾಗಿ ನಮ್ಮ ಕರಾವಳಿಗೆ ಎಂಟ್ರಿ ಕೊಟ್ಟು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನ ವೀಕ್‌ ಮಾಡ್ತಿದೆʼ ಅಂತ ಆರೋಪ ಮಾಡಿದ್ದಾರೆ. ಅಂದ್ಹಾಗೆ ದಕ್ಷಿಣ ಚೀನಾದ ಸಮುದ್ರದ ಈ ಭಾಗದಲ್ಲಿ ಈ ಹಿಂದೆಯೂ ಹಲವು ಬಾರಿ ಈ ರೀತಿಯ ವಿವಾದಗಳು ನಡೆದಿತ್ತು. ಈ ಕುರಿತು ರಿಯಾಕ್ಟ್‌ ಮಾಡಿರೋ ಅಮೆರಿಕ, ʻಅಂತರಾಷ್ಟ್ರೀಯ ಕಾನೂನು ಪ್ರಕಾರ ನಮ್ಮ ನೌಕೆ ಎಂದಿನಂತೆ ದಕ್ಷಿಣ ಚೀನಾ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸ್ತಿತ್ತು. ದಶಕಗಳಿಂದಲೂ ಅಮೆರಿಕದ 7th Fleet ಈ ಭಾಗದಲ್ಲಿ ಕಾರ್ಯಾಚರಿಸ್ತಲೇ ಬಂದಿತ್ತು. ಇದೇನು ಮೊದಲ ಬಾರಿಗೆ ಮಾಡ್ತಿರೋದಲ್ಲʼ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply