ವಿದೇಶಾಂಗ ಸಚಿವರೇ ಕಾಣೆ, ಭಯಾನಕ ನಿಗೂಢ ಚೀನಾ!

masthmagaa.com:

ಷಿ ಜಿನ್‌ಪಿಂಗ್‌ ಕಪಿಮುಷ್ಠಿಯಲ್ಲಿರುವ ಚೀನಾದಲ್ಲಿ ಜನರು ಇದಕ್ಕಿದ್ದಂತೆ ನಾಪತ್ತೆಯಾಗೋದು ಹೊಸ ವಿಷಯ ಏನಲ್ಲ. ಆದ್ರೀಗ ಚೀನಾದ ವಿದೇಶಾಂಗ ಸಚಿವರೇ ನಾಪತ್ತೆಯಾಗಿ ಒಂದು ತಿಂಗಳ ಕಳೆದಿದ್ದು, ಅವರ ಜಾಗಕ್ಕೀಗ ಬೇರೆಯವ್ರನ್ನ ನೇಮಕ ಕೂಡ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಚೀನಾ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಅವ್ರು ಕಾಣೆಯಾಗಿದ್ದಾರೆ ಅನ್ನೋ ಸುದ್ಧಿ ಹರಿದಾಡುತ್ತಿತ್ತು. ಇದೀಗ ಗಾಂಗ್‌ರನ್ನ ವಿದೇಶಾಂಗ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ ಅಂತ ಚೀನಾ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ನಿನ್ನೆ ನಡೆದ ಚೀನಾ ಶಾಸಕಾಂಗ ಅಧಿವೇಶನದಲ್ಲಿ ಗಾಂಗ್‌ರನ್ನ ಸಚಿವ ಸ್ಥಾನದಿಂದ ತೆಗೆದು ಹಾಕಲು ನಿರ್ಧರಿಸಲಾಗಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಕಳೆದ 23 ದಿನಗಳಿಂದ ಗಾಂಗ್‌ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಜೂನ್‌ 25ರಂದು ಶ್ರೀಲಂಕಾ, ವಿಯೆಟ್ನಾಂ ಹಾಗೂ ರಷ್ಯಾದ ಅಧಿಕಾರಿಗಳ ಜೊತೆ ಬೀಜಿಂಗ್‌ನಲ್ಲಿ ನಡೆದ ಮಲ್ಟಿಲ್ಯಾಟರಲ್‌ ಸಭೆಯಲ್ಲಿ ಭಾಗವಹಿಸಿದ್ದೇ ಅವ್ರ ಕೊನೆಯ ಸಾರ್ವಜನಿಕ ಸಭೆಯಾಗಿತ್ತು. ಇದಾದ ಬಳಿಕ ಗಾಂಗ್‌ ನಾಪತ್ತೆಯಾಗಿದ್ದಾರೆ. ಚೀನಾ ಮಾತ್ರ ಆರೋಗ್ಯ ಸಮಸ್ಯೆಯಿಂದ ಗಾಂಗ್‌ ಪಬ್ಲಿಕ್‌ನಲ್ಲಿ ಕಾಣಿಸಿಕೊಳ್ತಿಲ್ಲ ಅಂತ ಹೇಳಿತ್ತು. ಆದ್ರೆ ಈಗ ಅವ್ರೆಲ್ಲಿದಾರೆ, ಸಚಿವ ಸ್ಥಾನದಿಂದ ತೆಗೆದು ಹಾಕಿರೋದಕ್ಕೆ ಕಾರಣ ಏನು ಅನ್ನೋದನ್ನ ಕೂಡ ತಿಳಿಸದೇ ಅವರ ಜಾಗಕ್ಕೆ ಹೊಸಬರನ್ನ ನೇಮಕ ಮಾಡಿದೆ. ಅಲ್ದೆ ಗಾಂಗ್‌ ಕಾಣೆಯಾಗೋಕು ಮುಂಚೆ ಟಿವಿ ಆ್ಯಂಕರ್‌ ಒಬ್ರ ಜೊತೆಯಲ್ಲಿ ಲವ್‌ ಅಫೇರ್‌ ಇದೆ ಅನ್ನೋ ವಿಚಾರ ಚೀನಾದಲ್ಲಿ ಭಾರಿ ಸುದ್ಧಿ ಮಾಡಿತ್ತು. ಸೋ ಇದೇ ಕಾರಣಕ್ಕೆ ಗಾಂಗ್‌ ಕಣ್ಮರೆಯಯಾಗಿದ್ದಾರೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಆದ್ರೆ ಗಾಂಗ್‌ ಎಲ್ಲಿದ್ದಾರೆ ಯಾಕೆ ಪಬ್ಲಿಕ್‌ನಲ್ಲಿ ಕಾಣಿಸಿಕೊಂಡಿಲ್ಲ ಅನ್ನೋ ಪ್ರಶ್ನೆಗಳಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಅಷ್ಟೆ ಅಲ್ದೆ ಚೀನಾದಲ್ಲಿ ಗಾಂಗ್‌ರ ಕುರಿತು ಸರ್ಚ್‌ ಮಾಡಿದರೆ ಯಾವುದೇ ಆರ್ಟಿಕಲ್‌ಗಳು ಕಾಣಿಸುತ್ತಿಲ್ಲ. ಆದ್ರೆ ಸರ್ಕಾರದ ವೆಬ್‌ಸೈಟ್‌ನಲ್ಲಿ ಮಾತ್ರ ಸ್ಟೇಟ್‌ ಕೌನ್ಸಿಲ್‌ ಅಂತ ತೋರಿಸುತ್ತಿದೆ ಅಂದ್ರೆ ಗಾಂಗ್‌ ಅವ್ರು ಸ್ಟೇಟ್‌ ಕೌನ್ಸಿಲ್‌ ಆಗಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ರ ಆಪ್ತರಲ್ಲಿ ಒಬ್ಬರು ಹಾಗು ಚೀನಾ ರಾಜಕೀಯದಲ್ಲಿ ರೈಸಿಂಗ್‌ ಸ್ಟಾರ್‌ ಅಂತಾನೆ ಗುರುತಿಸಿಕೊಂಡಿದ್ದ ಗಾಂಗ್‌ರನ್ನ 2018ರಲ್ಲಿ ಡೆಪ್ಯುಟಿ ವಿದೇಶಾಂಗ ಸಚಿವರಾಗಿ ಪ್ರಮೋಟ್‌ ಮಾಡಲಾಗಿತ್ತು. ಈ ಹಿಂದೆ ಚೀನಾ ವಿದೇಶಾಂಗ ಸಚಿವರಾಗಿದ್ದ ವಾಂಗ್‌ ಯಿ ಅವ್ರನ್ನ ಚೀನಾ ಕಮ್ಯುನಿಸ್ಟ್‌ ಪಕ್ಷದಲ್ಲಿ ಉನ್ನತ ಹುದ್ದೆಗೆ ಪ್ರಮೋಟ್‌ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಚೀನಾ ರಾಯಭಾರಿಯಾಗಿ ಕೆಲಸ ಮಾಡಿದ್ದ ಗಾಂಗ್‌ರನ್ನ ಚೀನಾ ವಿದೇಶಾಂಗ ಸಚಿವರನ್ನಾಗಿ ನೇಮಿಸಿತ್ತು. ಇದೀಗ ಗಾಂಗ್‌ ಜಾಗಕ್ಕೆ ಮತ್ತೆ ಈ ಹಿಂದೆ ಇದ್ದ ವಾಂಗ್‌ ಯಿ ಅವರನ್ನ ನೇಮಿಸಲಾಗಿದೆ. ಇನ್ನು ಚೀನಾದಲ್ಲಿ ಈ ರೀತಿ ರಾಜತಾಂತ್ರಿಕ ಅಧಿಕಾರಿಗಳು ಹಠಾತ್‌ ಆಗಿ ಕಣ್ಮರೆಯಾಗೋದು ಇದೇ ಮೊದಲಲ್ಲ. 2012ರಲ್ಲಿ CPC ಪ್ರಧಾನ ಕಾರ್ಯದರ್ಶಿ ಆಗೋ ಮೊದಲು ಉಪಾಧ್ಯಕ್ಷರಾಗಿದ್ದ ಜಿನ್‌ಪಿಂಗ್‌ ಕೂಡ ಇದೇ ರೀತಿ 2 ವಾರ ಕಾಣೆಯಾಗಿದ್ದರು. ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಜಿನ್‌ಪಿಂಗ್‌ ಮಾವೋ ಝೆಡಾಂಗ್‌ ನಂತ್ರ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಅಧಿಕಾರ ನಡೆಸುತ್ತಿದ್ದಾರೆ.ಇತ್ತ ಚೀನಾದ ನೂತನ ವಿದೇಶಾಂಗ ಸಚಿವ ವಾಂಗ್‌ ಯಿ ಅವ್ರೊಂದಿಗೆ ಉತ್ತಮವಾಗಿ ಕೆಲಸ ಮಾಡೋ ನಿರೀಕ್ಷೆಯಿದೆ ಅಂತ ಅಮೆರಿಕ ಹೇಳಿದೆ. ತುಂಬಾ ಹಿಂದಿನಿಂದ ನನಗೆ ವಾಂಗ್‌ ಯಿ ಪರಿಚಯವಿದ್ದು, ಹಿಂದಿನಂತೆ ಈಗ ಒಟ್ಟಿಗೆ ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತೆ ಅನ್ನೊ ನಿರೀಕ್ಷೆಯಿದೆ ಅಂತ ಅಮೆರಿಕದ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಥನಿ ಬ್ಲಿಂಕನ್‌ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply