ಹೇಳಿಕೆಯೊಂದಕ್ಕೆ ಜಿನ್‌ಪಿಂಗ್‌ ಸಹಿ! ರಷ್ಯಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಶಾಕ್!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನ ಚೀನಾ ಸಪೋರ್ಟ್‌ ಮಾಡ್ತಿದೆ. ರಷ್ಯಾ ಮತ್ತು ಚೀನಾ ತುಂಬಾ ಕ್ಲೋಸ್‌ ಪಾರ್ಟ್ನರ್ಸ್‌ ಅಂತೆಲ್ಲಾ ಹೇಳಲಾಗ್ತಿತ್ತು. ಅದೇ ರೀತಿ ಚೀನಾ ಕೂಡ ಯುಎನ್‌ನಲ್ಲಿ ರಷ್ಯಾ ವಿರುದ್ದದ ಯಾವುದೇ ರೆಸಲ್ಯುಶನ್‌ ಅಥ್ವಾ ನಿರ್ಣಯಕ್ಕೆ ಮತ ಚಲಾಯಿಸದೇ ಅಂತರ ಕಾಯ್ದುಕೊಂಡಿತ್ತು. ಹೀಗಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಪುಟಿನ್‌ರನ್ನ ಫಾಲೋ ಮಾಡ್ತಿದಾರೆ. ಪಾಶ್ಚಿಮಾತ್ಯ ದೇಶಗಳನ್ನ ಎದುರು ಹಾಕಿಕೊಳ್ತಿದಾರೆ ಅಂತ ಅನ್ಸಿತ್ತು. ಇದೀಗ ಇವರಿಗೆಲ್ಲ ಜಿನ್‌ಪಿಂಗ್ ಒಂದ್‌ ರೀತಿ ಶಾಕ್‌ ಕೊಟ್ಟಿದ್ದಾರೆ. ಚೀನಾ ಹಾಗೂ ರಷ್ಯಾ ನಡುವಿನ ಸಂಬಂಧಗಳಿಗೆ ತನ್ನದೇ ಆದ ಲಿಮಿಟ್‌ ಇದೆ ಅಂತ ತೋರಿಸಿದ್ದಾರೆ. ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ʻಯುಕ್ರೇನ್‌ ಯುದ್ದವನ್ನ ಅನೇಕ ರಾಷ್ಟ್ರಗಳು ಖಂಡಿಸುತ್ವೆʼ ಅನ್ನೊ ಅಧಿಕೃತ ಹೇಳಿಕೆಗೆ ಜಿನ್‌ಪಿಂಗ್‌ ಸೈನ್‌ ಮಾಡಿದ್ದಾರೆ. ಇದರ ಮೂಲಕ ಜಿನ್‌ಪಿಂಗ್‌, ಪುಟಿನ್‌ರ ಪ್ರತ್ಯೇಕತೆಯನ್ನ ಚೀನಾ ಅನುಸರಿಸಲ್ಲ ಅಂತ ಜಗತ್ತಿಗೆ ಮೆಸೇಜ್‌ ನೀಡಿದ್ದಾರೆ. ಇತ್ತ ಜಿನ್‌ಪಿಂಗ್‌ರನ್ನ ಭೇಟಿ ಮಾಡಿದ್ದ ಜರ್ಮನಿಯ ಚಾನ್ಸಲೆರ್‌ ಓಲಾಫ್‌ ಶಾಲ್ಜ್‌, ತಮ್ಮ ನೀತಿಯ ಜೊತೆಗೆ ಜಗತ್ತಿನಲ್ಲಿ ಪುಟಿನ್‌ ಒಬ್ಬಂಟಿಯಾಗಿದ್ದಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply