ಚೀನಾ ರಾಯಭಾರಿ ಸ್ಥಾನಕ್ಕೆ ರಿಸೈನ್‌: ಕೆನಡಾದಿಂದ ವಾಪಸ್ಸಾದ ಪೀವು!

masthmagaa.com:

ಕಳೆದ ಐದು ವರ್ಷಗಳಿಂದ ಕೆನಡಾದಲ್ಲಿ ಕಾರ್ಯ ನಿರ್ವಹಿಸ್ತಿದ್ದ ಚೀನಾ ರಾಯಭಾರಿ ಕಾಂಗ್‌ ಪೀವು ತಮ್ಮ ಸ್ಥಾನವನ್ನ ತ್ಯಜಿಸಿ ಚೀನಾಗೆ ವಾಪಸ್ಸಾಗಿದ್ದಾರೆ. ಆದರೆ ರಾಯಭಾರಿ ಸ್ಥಾನವನ್ನ ತ್ಯಜಿಸಲು ಕಾರಣ ಏನು ಅಂತ ಗೊತ್ತಾಗಿಲ್ಲ. ಹಾಗೇ ಚೀನಾ ಹಾಗೂ ಕೆನಡಾ ದೇಶಗಳು ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೀನಾ ಹಾಗೂ ಕೆನಡ ನಡುವೆ ಸಾಕಷ್ಟು ಮುಸುಕಿನ ಗುದ್ದಾಟ ನಡೆಯುತ್ತಿದ್ದು ಇತ್ತೀಚಿಗೆ ಚೀನಾ ಮೇಲೆ ಕೆನಡ ಗಂಭೀರ ಆರೋಪ ಮಾಡಿತ್ತು. ಕೆನಡ ಚುನಾವಣೆಯಲ್ಲಿ ಚೀನಾ ಕೈಯಾಡಿಸಿದೆ ಅಂತ ಆರೋಪ ಕೇಳಿ ಬಂದಿತ್ತು. ಇದರ ನಡುವೆಯೇ ಈಗ ಈ ಬೆಳವಣಿಗೆಯಾಗಿದೆ.

-masthmagaa.com

Contact Us for Advertisement

Leave a Reply