ಗುಪ್ತಚರ ಉದ್ದೇಶಕ್ಕೆ ಬಲೂನ್‌ನ ಬಳಕೆ! ಸತ್ಯಕತೆ ಬಿಚ್ಚಿಟ್ಟ ಅಮೆರಿಕ!

masthmagaa.com:

ಇತ್ತೀಚೆಗೆ ಚೀನಾದ ಶಂಕಿತ ಸ್ಪೈ ಬಲೂನ್‌ನ್ನ ಅಮೆರಿಕ ಹೊಡೆದುರಳಿಸಿತ್ತು. ಬಳಿಕ ಅದರ ಅವಶೇಷಗಳನ್ನ ಕಲೆಕ್ಟ್‌ ಮಾಡಿ ಸ್ಟಡಿ ಮಾಡಿದೆ. ಇದೀಗ ಬಲೂನ್‌ ಸಿಗ್ನಲ್‌ ಇಂಟಲಿಜೆನ್ಸ್‌ ಹಾಗೂ ಮಾನಿಟರ್‌ ಮಾಡುವ ಸಾಮರ್ಥ್ಯಗಳನ್ನ ಹೊಂದಿತ್ತು ಅಂತ ಅಮೆರಿಕ ಹೇಳಿದೆ. ಇದರೊಂದಿಗೆ ಬಲೂನ್‌ ಗುಪ್ತಚರ ಉದ್ದೇಶಕ್ಕೆ ಹಾರಾಟ ನಡೆಸಿತ್ತು ಅನ್ನೊದು ಸ್ಪಷ್ಟವಾಗಿದೆ. ಬಲೂನ್‌ನಲ್ಲಿ ಹಲವಾರು ಆಂಟೆನ್ನಾಗಳಿವೆ. ಬಲೂನ್ ಕಮ್ಯುನಿಕೇಶನ್‌ಗಳನ್ನ ಸಂಗ್ರಹಿಸುವ ಮತ್ತು ಜಿಯೋಲೊಕೇಟಿಂಗ್ ಮಾಡುವ ಸಾಮರ್ಥ್ಯ ಹೊಂದಿತ್ತು ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ತಿಳಿಸಿದೆ. ಜೊತೆಗೆ ಚೀನಾದ ಆರ್ಮಿ ಜೊತೆ ಡೈರೆಕ್ಟ್‌ ಲಿಂಕ್‌ ಹೊಂದಿರುವ ಸಂಸ್ಥೆಯೇ ಈ ಬಲೂನ್‌ನ್ನ ಅಭಿವೃದ್ದಿ ಪಡೆಸಿದೆ ಅಂತ ಹೇಳಿದೆ. ಇದೇ ವೇಳೆ ಅಮೆರಿಕದ ವಾಯುಪ್ರದೇಶದಲ್ಲಿ ಬಲೂನ್‌ನ ನುಸುಳುವಿಕೆಯನ್ನ ಬೆಂಬಲಿಸಿದ ಸಂಸ್ಥೆಯನ್ನ ಎಕ್ಸ್‌ಪೋಸ್‌ ಮಾಡಿ, ಸರಿಯಾದ ಕ್ರಮಗಳನ್ನ ಕೈಗೊಳ್ಳಲಾಗುತ್ತೆ ಅಂತ ಅಮೆರಿಕ ಎಚ್ಚರಿಕೆ ನೀಡಿದೆ. ಅಂದ್ಹಾಗೆ ಚೀನಾ ಈ ಬಲೂನ್‌ ತಮ್ಮದೇ ಆಗಿದ್ದು, ಕೇವಲ ಹವಮಾನ ಅಧ್ಯಯನಕ್ಕೆ ಹಾರಾಟ ನಡೆಸ್ತಿದೆ. ಯಾವುದೇ ಗುಪ್ತಚರ ಚಟುವಟಿಕೆಗಳಿಗಲ್ಲ ಅಂತ ಚೀನಾ ಹೇಳಿಕೊಂಡಿತ್ತು.

-masthmagaa.com

Contact Us for Advertisement

Leave a Reply