ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ ಚೀನಾ: ಲಡಾಕ್‌ ಸಮೀಪದಲ್ಲೇ ವಿಮಾನ ಹಾರಾಟ!

masthmagaa.com:

ಚೀನಾ, ಭಾರತ ನಡುವಿನ ಗಡಿ ಉದ್ವಿಗ್ನತೆ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಇತ್ತೀಚಿಗೆ ನಡೆದ ಗಡಿ ಸಂಘರ್ಷಗಳಿಂದ ಉಭಯ ಸೇನೆಗಳು ಸದ್ಯ ಸ್ಟಾಂಡಿಂಗ್‌ ಪೊಸಿಸನ್‌ನಲ್ಲೇ ಇದೆ. ಇದರ ನಡುವೆಯೇ ಕುತಂತ್ರಿ ಚೀನಾ ಮತ್ತೆ ತನ್ನ ನರಿ ಬುದ್ದಿ ತೋರಿಸಿದ್ದು ಲಡಾಕ್‌ನಲ್ಲಿರುವ ಭಾರತದ ಗಡಿ ಸಮೀಪದಲ್ಲೇ ತನ್ನ ಯುದ್ದ ವಿಮಾನವನ್ನ ಹಾರಿಸಿದೆ. ಕಳೆದ ಜೂನ್‌ನ ಕೊನೇವಾರದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗಿನ ಜಾವ 4 ಗಂಟೆಗೆ ಸುಮಾರಿಗೆ ಚೀನಿಯರು ವಿಮಾವನ್ನ ಹಾರಿಸಿದ್ದು ಸದ್ಯ ಈಗ ರಾಡರ್‌ ಹಾಗೂ ಸೇನೆಯನ್ನ ಸಜ್ಜುಗೊಳಿಸಲಾಗಿದೆ ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply