ಚಿಯಾನ್ ವಿಕ್ರಂಗೆ ಹೃದಯಾಘಾತ ಆಗಿಲ್ಲ: ಸುಳ್ಳು ಸುದ್ದಿ ನಂಬಬೇಡಿ ಎಂದ ವಿಕ್ರಂ ಮ್ಯಾನೇಜರ್!

masthmagaa.com:

ತಮಿಳಿನ ಖ್ಯಾತ ನಟ ಬಹುಮುಖ ಪ್ರತಿಭೆ  ‘ಚಿಯಾನ್’ ವಿಕ್ರಮ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಿವೆ.

ಆದರೆ, ನಿಜಾಂಶ ಬೇರೆಯೇ ಇದೆ. ಚಿಯಾನ್ ವಿಕ್ರಂಗೆ ಹೃದಯಾಘಾತ ಆಗಿಲ್ಲ, ಅವರಿಗೆ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿದೆ ಅಷ್ಟೇ. ದಯವಿಟ್ಟು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಡಿ. ವಿಕ್ರಂಗೆ ಹೃದಯಾಘಾತ ಆಗಿದೆ ಎನ್ನುವ ಸುದ್ದಿಗಳು ಬಿತ್ತರವಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ವಿಕ್ರಂ ಅವರ ಮ್ಯಾನೇಜರ್ ಸೂರ್ಯನಾರಾಯಣನ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹಾಗೆ ವಿಕ್ರಂ ಈಗ ಹುಷಾರಾಗಿದ್ದಾರೆ, ಒಂದು ದಿನದ ಒಳಗೆ ಡಿಸ್ಚಾರ್ಜ್ ಕೂಡ ಆಗ್ತಾರೆ. ವಿಕ್ರಂ ಫ್ಯಾಮಿಲಿಗೆ ಈಗ ಪ್ರೈವಸಿ ಬೇಕಿದೆ. ದಯವಿಟ್ಟು, ಸುಳ್ಳು ಸುದ್ದಿಗಳನ್ನು ನಂಬಬೇಡಿ ಮನವಿ ಮಾಡಿಕೊಂಡಿದ್ದಾರೆ.

ಸಧ್ಯಕ್ಕೆ ವಿಕ್ರಮ್ ಅವರನ್ನ  ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ರಮ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಇಂದು ಸಂಜೆ 6 ಗಂಟೆಗೆ ಚೆನ್ನೈನಲ್ಲಿ ನಡೆಯಲಿರುವ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ವಿಕ್ರಮ್ ಭಾಗವಹಿಸಬೇಕಿತ್ತು. ಹಠಾತ್ ಅನಾರೋಗ್ಯದ ಕಾರಣ ಅವರನ್ನು ಕಾವೇರಿ ಆಸ್ಪತ್ರೆಗೆ ಸಾಗಿಸಲಾಯಿತು. ನಟ ವಿಕ್ರಮ್‌ಗೆ ಈಗ 56 ವರ್ಷ ವಯಸ್ಸಾಗಿದೆ.

-masthmagaa.com

Contact Us for Advertisement

Leave a Reply