ಬೆಂಗಳೂರಿಗರಿಗೆ ಹೊಸ ವರ್ಷಾಚರಣೆಗೆ ಗೈಡ್‌ಲೈನ್ಸ್‌ ಬಿಡುಗಡೆ! ಏನಿದೆ ಸೂಚನೆಯಲ್ಲಿ?

masthmagaa.com:

ಕೋವಿಡ್‌ ಕಾರಣದಿಂದ 2 ವರ್ಷ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್‌ ಬಿದ್ದಿತ್ತು. ಹೀಗಾಗಿ ಎರಡು ವರ್ಷದ ಬಳಿಕ ಈಗ ಕ್ರಿಸ್‌ಮಸ್‌ ಮತ್ತು ಹೊಸ ವರ್ಷ ಆಚರಿಸೋಕೆ ಬೆಂಗಳೂರಿನ ಜನ ತಯಾರಿ ನಡೆಸುತ್ತಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚೆರಿಕೆ ವಹಿಸೋಕೆ ಅಂತ ಪೊಲೀಸರು ಕೆಲವು ಸೂಚನೆಗಳನ್ನ ಬಿಡುಗಡೆ ಮಾಡಿದ್ದಾರೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಆಚರಣೆಗೆ ಕಾರ್ಯಕ್ರಮ ಆಯೋಜಕರು, ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರು ಆ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ಪರ್ಮಿಶನ್‌ ತೆಗೆದುಕೊಳ್ಳಬೇಕು. ಪಾರ್ಟಿಗಳಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳು, ನಶಾ ಸಾಮಗ್ರಿಗಳನ್ನ ತರೋಕೆ ಅನುಮತಿ ನೀಡಬಾರ್ದು. ಹಾಗೂ ಸಿಸಿಟಿವಿ ಕಡ್ಡಾಯವಾಗಿ ಇರ್ಬೇಕು ಅಂತ ಸೂಚನೆಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply